Publish Date: Fri, 17 Apr 2020 (10:41 IST)
Updated Date: Fri, 17 Apr 2020 (10:42 IST)
ರಾಮನಗರ: ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ-ರೇವತಿ ಇಂದು ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು. ನಿಖಿಲ್ ವಿವಾಹ ಸಮಾರಂಭ ರಾಮನಗರದ ತೋಟದ ಮನೆಯಲ್ಲಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ನೆರವೇರಿದೆ.
ಲಾಕ್ ಡೌನ್ ನಿಂದಾಗಿ ಕೇವಲ ಸೀಮಿತ ಆಹ್ವಾನಿತರು ಮಾತ್ರ ವಿವಾಹ ಕಾರ್ಯಕ್ರಮಕ್ಕೆ ಹಾಜರಿದ್ದಾರೆ. ಮಾಧ‍್ಯಮಗಳನ್ನೂ ಸಮಾರಂಭದಿಂದ ದೂರವಿಡಲಾಗಿದೆ.
ರಾಜ್ಯ ಸರ್ಕಾರದಿಂದ ವಿಶೇಷ ಅನುಮತಿ ಪಡೆದು ಕುಮಾರಸ್ವಾಮಿ ಪುತ್ರನ ಮದುವೆ ಸಮಾರಂಭ ನಡೆಸುತ್ತಿದ್ದಾರೆ. ಅದ್ಧೂರಿ ವೇದಿಕೆಯಲ್ಲಿ ನಿಖಿಲ್ ರೇವತಿ ಸತಿಪತಿಗಳಾಗಿದ್ದಾರೆ.