Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಇಷ್ಟದ ವ್ಯಕ್ತಿ ಜೊತೆ ಲಿವ್ ಸಂಬಂಧ ಇಟ್ಟುಕೊಳ್ತರಂತೆ ನಿಕಿಶಾ

ಇಷ್ಟದ ವ್ಯಕ್ತಿ ಜೊತೆ ಲಿವ್ ಸಂಬಂಧ ಇಟ್ಟುಕೊಳ್ತರಂತೆ ನಿಕಿಶಾ
Bangalore , ಸೋಮವಾರ, 19 ಡಿಸೆಂಬರ್ 2016 (12:41 IST)
ಕನ್ನಡದ ಬೆಡಗಿ ನಿಕಿಶಾ ಪಟೇಲ್ ಗೊತ್ತಲ್ವಾ? ನರಸಿಂಹ, ಡಕೋಟಾ ಪಿಕ್ಚರ್, ವರದನಾಯಕ, ನಮಸ್ತೆ ಮೇಡಂ, ಅಲೋನ್ ನಂತಹ ವೈವಿಧ್ಯಮಯ ಪಾತ್ರಗಳಲ್ಲಿ ಅಭಿನಯಿಸಿರುವ ತಾರೆ. ಈ ಬೆಡಗಿ ತೆರೆ ಮೇಲಷ್ಟೇ ಅಲ್ಲ ಖಾಸಗಿ ಬದುಕಿನಲ್ಲೂ ಬೋಲ್ಡ್ ಎಂಬುಗು ಗೊತ್ತಾಗಿದೆ. 
 
ತನ್ನ ಮದುವೆ ಬಗ್ಗೆ ನಿಕಿಶಾ ಮಾತನಾಡುತ್ತಾ, ಇನ್ನೂ ಅಂದುಕೊಂಡಿಲ್ಲ. ಗಂಡ ಹೆಂಡತಿಯಾಗಿ ಬದುಕಲು ಮದುವೆ ಎಂಬ ಬಂಧನನ ಬೇಕಾಗಿಲ್ಲ ಎಂಬುದು ನನ್ನ ಅಭಿಪ್ರಾಯ. ಮದುವೆಯಾಗಿ ವೈವಾಹಿಕ ಜೀವನ ನಡೆಸುತ್ತಿರುವ ಪ್ರತಿಯೊಬ್ಬರೂ ಸುಖವಾಗಿದ್ದಾರೆ ಎಂಬ ನಂಬಿಕೆ ಇಲ್ಲ. 
 
2030ರ ವೇಳೆಗೆ ನಮ್ಮ ದೇಶದಲ್ಲಿ ಮದುವೆ ಅನ್ನೋ ಬಂಧನದ ಸ್ಥಾನದಲ್ಲಿ ಸಹಜೀವನ ಶೈಲಿ ಬರಲಿದೆ ಎಂದು ನಂಬಿದ್ದೇನೆ. ನಾನೂ ಅಷ್ಟೇ ನನಗೆ ಇಷ್ಟವಾದ ಹುಡುಗನೊಂದಿಗೆ ಸಹಜೀವನ ಮಾಡುತ್ತೇನೆ ಎಂದಿದ್ದಾರೆ. ನಿಕಿಶಾರ ಈ ಬೋಕಲ್ಡ್ ಹೇಳಿಕೆಗೆ ಚಿತ್ರರಂಗ ಅವಾಕ್ಕಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಜಯಲಲಿತಾ ಪಾತ್ರ ನನ್ನ ಕನಸು: ರಮ್ಯಾಕೃಷ್ಣನ್