ಒಂದು ಕಾಲದಲ್ಲಿ ಸ್ಟಾರ್ ಹೀರೋಗಳಿಗೆಲ್ಲಾ ಹೀರೋಯಿನ್ ಆಗಿದ್ದವರು ರಮ್ಯಾ ಕೃಷ್ಣನ್. ಈಗ ಪೋಷಕರ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರದಲ್ಲಿನ ಅವರ ಶಿವಗಾಮಿ ಪಾತ್ರವಂತೂ ದೇಶವ್ಯಾಪಿಯಾಗಿ ಒಳ್ಳೆ ಪ್ರಶಂಸೆಗೆ ಪಾತ್ರವಾಗಿದೆ.
ಇದುವರೆಗೂ ತಾವು ಕನಸಿನ ಪಾತ್ರ ಅಂತ ಏನೂ ಮಾಡಿಲ್ಲ. ಆದರೆ ಈಗ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂತಗ ಜಯಲಲಿತಾ ಅವರ ಪಾತ್ರ ಪೋಷಿಸುತ್ತಿರುವುದರಿಂದ ನನ್ನ ನೆರವೇರುತ್ತಿದೆ ಎಂದಿದ್ದಾರೆ.
ಇತ್ತೀಚೆಗೆ ಜಯಲಲಿತಾರಾ ಗೆಟಪ್ನಲ್ಲಿ ರಮ್ಯಾಕೃಷ್ಣಾ ಅವರನ್ನು ತೋರಿಸಲಾಗಿತ್ತು. ಅದರ ಕೆಳಗೆ ಮದರ್ ಎಂಬ ಟೈಟಲ್ ಸಹ ಕೊಟ್ಟಿದ್ದರು. ಇದನ್ನು ಯಾರು ಮಾಡಿದರೋ ಏನೋ ಗೊತ್ತಿಲ್ಲ. ಸಾಮಾಜಿಕ ತಾಣಗಳಲ್ಲಿ ಈ ಫೋಟೋ ಹರಿದಾಡಿದೆ.
ಈ ಫೋಟೋ ಎಲ್ಲೆಲ್ಲೂ ಹರಿದಾಡುತ್ತಾ ಸಾಗಿ ಕಡೆಗೆ ರಮ್ಯಾಕೃಷ್ಣ ಅವರ ಬಳಿಗೆ ಬಂದಿದೆಯಂತೆ. ಇದನ್ನು ನೋಡಿ ಅವರು ಎಗ್ಜೈಟ್ ಆಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಮ್ಯಾಕೃಷ್ಣ, ಇದನ್ನೆಲ್ಲಾ ನೋಡಿದ ಮೇಲೆ ಜಯಲಲಿತಾ ಪಾತ್ರ ಪೋಷಿಸಬೇಕು ಅನ್ನಿಸುತ್ತಿದೆ. ಯಾರಾದರೂ ಒಳ್ಳೆ ಸ್ಕ್ರಿಪ್ಟ್ ತಂದರೆ ಖಂಡಿತ ಮಾಡುತ್ತೇನೆ. ’ಅಮ್ಮ’ ತುಂಬ ಧೈರ್ಯವಂತೆ...ಕೆಲವು ಲಕ್ಷ ಮಂದಿಯಂತೆ ನನಗೂ ಅವರು ಸ್ಫೂರ್ತಿಯ ಸೆಲೆ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.