ಬೆಂಗಳೂರು: ಕಿಚ್ಚ ಸುದೀಪ್ ನಾಯಕರಾಗಿರುವ ವಿಕ್ರಾಂತ್ ರೋಣ ಹೊಸ ಬಗೆಯ ಸಿನಿಮಾ. ಈ ಸಿನಿಮಾ ವೀಕ್ಷಿಸಿದ ಕೆಲವರು ಟೀಕೆ ಟಿಪ್ಪಣಿ ಮಾಡಿದ್ದೂ ಇದೆ. ಆದರೆ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸಿನಿಮಾದ ಸಕಾರಾತ್ಮಕ ಅಂಶಗಳನ್ನು ಪಟ್ಟಿ ಮಾಡಿ ಹೇಳಿದ್ದಾರೆ.
ವಿಕ್ರಾಂತ್ ರೋಣ ಎನ್ನುವುದು ಕನ್ನಡದ ಮಟ್ಟಿಗೆ ಹೊಸ ಬಗೆಯ ಪ್ರಯೋಗಾತ್ಮಕ ಸಿನಿಮಾ ಎಂದು ಸಿನಿಮಾ ವೀಕ್ಷಿಸಿದ ಬಳಿಕ ಪ್ರೇಕ್ಷಕನಾಗಿ ನಾಗತಿಹಳ್ಳಿ ಚಂದ್ರಶೇಖರ್ ವಿಮರ್ಶೆ ಮಾಡಿದ್ದಾರೆ.
ಒಬ್ಬ ಪ್ರೇಕ್ಷಕನಾಗಿ ವಿಕ್ರಾಂತ್ ರೋಣನ ಉತ್ತಮಾಂಶಗಳನ್ನು ಪಟ್ಟಿ ಮಾಡಬಯಸುವೆ. ನಮ್ಮ ಅಪ್ಪಟ ಪ್ರಾದೇಶಿಕತೆ, ಕಲೆ, ಛಾಯಾಗ್ರಹಣ, ಸಂಗೀತ, ಶಬ್ಧ ವಿನ್ಯಾಸ- ಇವು ಮೇಲ್ದರ್ಜೆಯಲ್ಲಿರುವುದು. ಸುದೀಪ್ ತೊಡಗಿಸಿಕೊಂಡಿರುವ ಶೈಲಿ, ರಾಜಿಯಾಗದ ಶ್ರೀಮಂತ ನಿರ್ಮಾಣ. ಕನ್ನಡ ಪ್ರೇಕ್ಷಕ ಸಿನಿಕನಾಗದೇ ಭಿನ್ನ ಬಗೆಯ ಇಂಥಾ ಪ್ರಯೋಗಗಳ ಬಗ್ಗೆ ನಿಜಕ್ಕೂ ಹೆಮ್ಮೆಪಡಬೇಕು ಎಂದಿದ್ದಾರೆ ನಾಗತಿಹಳ್ಳಿ.