ಹೈದರಾಬಾದ್: ತೆಲುಗು ನಟಿ ಸಮಂತಾ ಅಕ್ಕಿನೇನಿ ನಿನ್ನೆ ಜನ್ಮದಿನ ಆಚರಿಸಿಕೊಂಡಿದ್ದರು. ಜನ್ಮದಿನ ಪ್ರಯುಕ್ತ ಎಂದಿನಂತೆ ಹೊರಗಿನಿಂದ ಕೇಕ್ ತರಿಸಲು ಸಾಧ‍್ಯವಾಗಿರಲಿಲ್ಲ. ಹೀಗಾಗಿ ಮನೆಯಲ್ಲೇ ಪತಿ ನಾಗ ಚೈತನ್ಯ ಕೇಕ್ ತಯಾರಿಸಿದ್ದರು.
ಮುದ್ದಿನ ಮಡದಿದಾಗಿ ನಾಗಚೈತನ್ಯ ಖುದ್ದಾಗಿ ಕೇಕ್ ತಯಾರಿಸಿ ಮುಂದಿಟ್ಟರೆ ಸಮಂತಾ ಮಾಡಿದ್ದೇನು ಗೊತ್ತಾ? ಗಂಡ ಮಾಡಿದ ಕೇಕ್ ಮುಂದೆ ಕೂತು ಕೇಕ್ ಕಟ್ ಮಾಡುವ ಮೊದಲು ಸಮಂತಾ ಶಿಸ್ತಾಗಿ ಕೂತು ಕೈ ಮುಗಿದು ವಿಶ್ವದೆಲ್ಲೆಡೆ ಕೊರೋನಾ ನಿವಾರಣೆಯಾಗಲಿ ಎಂದು ಪ್ರಾರ್ಥಿಸಿದ್ದಾರೆ. ಬಳಿಕವೇ ಕೇಕ್ ಕಟ್ ಮಾಡಿದ್ದಾರೆ.
ಇದರ ಜತೆಗೆ ನಾಗ ಚೈತನ್ಯ ಕೇಕ್ ತಯಾರಿಸುವ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಮಂತಾ ಪ್ರಕಟಿಸಿದ್ದಾರೆ.