ಚೆನ್ನೈ : ಬೌಲರ್ ಮುತ್ತಯ್ಯ ಮುರಳೀಧರನ್ ಅವರ ಜೀವನಕಥೆ ಆಧಾರಿತ ಸಿನಿಮಾದಲ್ಲಿ ನಟ ವಿಜಯ್ ಸೇತುಪತಿ ಅವರು ನಟಿಸುವ ಬಗ್ಗೆ ವಿವಾದ ಏರ್ಪಟ್ಟಿತ್ತು. ಇದೀಗ ಆ ವಿವಾದ ಕೊನೆಗೊಂಡಿದೆ ಎನ್ನಲಾಗಿದೆ.
ಹೌದು. ಶ್ರೀಲಂಕಾ ಮಣ್ಣಿನ ಬಗ್ಗೆ ಹೆಮ್ಮೆಪಡುವ ಮುತ್ತಯ್ಯ ಮುರಳೀಧರನ್ ಜೀವನಾಧಾರಿತ ಚಿತ್ರದಲ್ಲಿ ವಿಜಯ್ ಸೇತುಪತಿ ಮುರಳೀಧರನ್ ಪಾತ್ರ ನಿರ್ವಹಿಸುವುದು ಹಲವರಿಗೆ ಇಷ್ಟವಿರಲಿಲ್ಲ. ವಿಜಯ್ ಸೇತುಪತಿ ಈ ಚಿತ್ರವನ್ನು ಕೈಬಿಡಬೇಕೆಂದು ಅನೇಕ ಗಣ್ಯರು ಹೇಳಿದ್ದರು.
ಈ ಬಗ್ಗೆ ಸಮಸ್ಯೆ ಮುಂದುವರಿಯುತ್ತಿದ್ದಂತೆ ವಿಜಯ್ ಸೇತುಪತಿ ಚಿತ್ರದಿಂದ ಹಿಂದೆ ಸರಿಯುವಂತೆ ಮುರಳೀಧರನ್ ಅವರು ತಿಳಿಸಿದ್ದಾರೆ. ಆದಕಾರಣ ಅವರ ಮನವಿಯಂತೆ ವಿಜಯ್ ಸೇತುಪತಿ ಚಿತ್ರದಿಂದ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ.