ಪಣಜಿ: ಮಲಯಾಳಂನ ಉದಯೋನ್ಮುಖ ನಟ ಸಿಧು ಆರ್ ಪಿಳ್ಳೈ ಗೋವಾದ ಬೀಚ್ ನಲ್ಲಿ ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.
ಸೂಪರ್ ಸ್ಟಾರ್ ಮಮ್ಮುಟ್ಟಿ ಪುತ್ರ ದುಲ್ಖರ್ ಸಲ್ಮಾನ್ ಜತೆ ‘ಸೆಕೆಂಡ್ ಶೋ’ ಸಿನಿಮಾದಲ್ಲಿ ಅಭಿನಯಿಸಿದ್ದ ಸಿಧು ಮೃತದೇಹ ಗೋವಾ ಬೀಚ್ ನಲ್ಲಿ ಅನುಮಾನಸ್ಪದ ರೀತಿಯಲ್ಲಿ ಪತ್ತೆಯಾಗಿದೆ.
ಮೂಲಗಳ ಪ್ರಕಾರ ಜನವರಿ 12 ರಂದು ಗೋವಾ ಬೀಚ್ ನಲ್ಲಿ ಸಮುದ್ರ ನೀರು ಪಾಲಾಗಿದ್ದರು ಎನ್ನಲಾಗಿದೆ. ಇದೀಗ ಮೃತದೇಹ ಪತ್ತೆಯಾಗಿದ್ದು ಕುಟುಂಬದವರು ಗುರುತು ಹಿಡಿದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ