ಕೊಚ್ಚಿ: ಬಹುಭಾಷಾ ನಟಿಯ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿತರಾಗಿರುವ ಮಲಯಾಳಂ ನಟ ದಿಲೀಪ್ ಗೆ ಇನ್ನೂ ಬಿಡುಗಡೆಯ ಭಾಗ್ಯವಿಲ್ಲ. ಹೈಕೋರ್ಟ್ ನಲ್ಲಿ ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ.
ತನಿಖಾ ತಂಡದ ವಿವರಗಳನ್ನು ಅಧ್ಯಯನ ಮಾಡಿದ ಹೈಕೋರ್ಟ್ ಮೇಲ್ನೋಟಕ್ಕೆ ದಿಲೀಪ್ ಮೇಲಿನ ಆರೋಪ ನಿಜವೆಂಬುದಕ್ಕೆ ಪುಷ್ಠಿ ಸಿಗುತ್ತಿದೆ. ಇನ್ನೂ ಹೆಚ್ಚಿನ ಸಾಕ್ಷ್ಯಗಳ ವಿಚಾರಣೆ, ತನಿಖೆ ಪೂರ್ಣಗೊಳ್ಳುವವರೆಗೆ ಜಾಮೀನು ಸಾಧ್ಯವಲ್ಲ ಎಂದು ಹೈಕೋರ್ಟ್ ತಿಳಿಸಿದೆ.
ಇದೇ ವೇಳೆ ಘಟನೆಗೆ ಮುಖ್ಯ ಸಾಕ್ಷಿಯಾಗಿದ್ದ ಮೆಮೊರಿಕಾರ್ಡ್, ಮೊಬೈಲ್ ಫೋನ್ ಆರೋಪಿ ದಿಲೀಪ್ ಕೈವಶದಲ್ಲಿದೆ ಎಂಬ ತನಿಖಾ ತಂಡದ ವರದಿ ಸತ್ಯವಾದರೆ, ಈಗ ಆರೋಪಿಯನ್ನು ಹೊರಬಿಡುವುದರಿಂದ ಈ ಪ್ರಮುಖ ಸಾಕ್ಷ್ಯಗಳು ನಾಶವಾಗುವ ಸಾಧ್ಯತೆಯಿದೆ ಎಂಬ ಕಾರಣಕ್ಕೆ ಕೋರ್ಟ್ ಜಾಮೀನು ನಿರಾಕರಿಸಿದೆ.
ಈ ಹಿನ್ನಲೆಯಲ್ಲಿ ದಿಲೀಪ್ ನ್ಯಾಯಾಂಗ ಬಂಧನದಲ್ಲೇ ಮುಂದುವರಿಯಲಿದ್ದಾರೆ. ಆದರೆ ನಾಳೆ ನ್ಯಾಯಾಂಗ ಬಂಧನ ಅವಧಿ ಮುಕ್ತಾಯಗೊಳ್ಳಲಿದೆ. ಹೀಗಾಗಿ ಮತ್ತೆ ದಿಲೀಪ್ ಪರ ವಕೀಲರು ಅಂಗಮಾಲಿ ನ್ಯಾಯಾಲಯದಲ್ಲಿ ಅಥವಾ ಸುಪ್ರೀಂ ಕೋರ್ಟ್ ನಲ್ಲಿ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ