ಚೆನ್ನೈ : ಕೊರೊನಾ ಕಾರಣದಿಂದ ಮುಚ್ಚಲಾಗಿದ್ದ ಚಿತ್ರಮಂದಿರಗಳನ್ನು ತೆರೆಯಲು ತಮಿಳುನಾಡು ಸರ್ಕಾರ ಅನುಮತಿ ನೀಡಿದೆ. ಅದಕ್ಕಾಗಿ ದೀಪಾವಳಿಯಿಂದ ಚಿತ್ರಮಂದಿರಗಳಲ್ಲಿ ಚಲನಚಿತ್ರಗಳನ್ನು ಪ್ರದರ್ಶಿಸಲು ಸಿದ್ಧತೆಗಳು ನಡೆಯುತ್ತಿವೆ. ಅದರಂತೆ ಮಹೇಶ್ ಬಾಬು ಅವರ ಅಭಿನಯದ ಈ ಚಿತ್ರವನ್ನು ಬಿಡುಗಡೆ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.
ಮಹೇಶ್ ಬಾಬು ಅಭಿನಯದ ಸರಿಲೆರು ನಿಕೆವ್ವರು ಈ ವರ್ಷದ ಆರಂಭದಲ್ಲಿ ಬಿಡಿಗಡೆಯಾಗಿ ಸೂಪರ್ ಹಿಟ್ ಆಗಿತ್ತು. ಇದು ಮಹೇಶ್ ಬಾಬು ಅವರ ವೃತ್ತಿ ಜೀವನದಲ್ಲಿ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿತ್ತು. ಆದಕಾರಣ ಈ ಚಿತ್ರವನ್ನು ಇವಾನುಕು ಸರಿಯಾನಾ ಅಲೈಲೈ ಎಂದು ಶೀರ್ಷಿಕೆ ನೀಡಿ ದೀಪಾವಳಿಯ ಉಡುಗೊರೆಯಾಗಿ ತಮಿಳುನಾಡಿನ ಚಿತ್ರಮಂದಿರಗಳಲ್ಲಿ ಚಿತ್ರ ಬಿಡಗಡೆ ಮಾಡಲಾಗುತ್ತಿದೆ ಎನ್ನಲಾಗಿದೆ.
ಈಗಾಗಲೇ ಯಾವುದೇ ಮಾಸ್ ಚಿತ್ರ ಸಿದ್ಧವಾಗಿಲ್ಲ. ಅಲ್ಲದೇ ತಮಿಳುನಾಡಿನಲ್ಲಿ ಮಹೇಶ್ ಬಾಬು ಅವರಿಗೆ ಅಪಾರ ಅಭಿಮಾನಿಗಳಿರುವ ಕಾರಣ ಈ ಚಿತ್ರವನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಿದರೆ ನೋಡಲು ಪ್ರೇಕ್ಷಕರು ಬರುತ್ತಾರೆ ಎಂದು ಯೋಚಿಸಲಾಗಿದೆ.