ಚೆನ್ನೈ : ತಮಿಳಿನ ಖ್ಯಾತ ನಟ ವಿಜಯ್ ಅವರ ಅಭಿನಯದ ಮಾಸ್ಟರ್ ಚಿತ್ರ ಬಿಡುಗಡೆಯ ಹಂತದಲ್ಲಿದ್ದು, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಈ ನಡುವೆ ವಿಜಯ್ ಅವರ 65ನೇ ಚಿತ್ರವನ್ನು ಯಾರು ನಿರ್ದೇಶಿಸಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಈ ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಿಸಲಿದ್ದು, ನಿರ್ದೇಶಕ ಮುರುಗದಾಸ್ ನಿರ್ದೇಶಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಮುರಗದಾಸ್ ಮತ್ತು ನಿರ್ಮಾಪಕರ ನಡುವಿನ ಸಮಸ್ಯೆಯಿಂದ ಅವರು ಚಿತ್ರದಿಂದ ಹೊರಹೋಗಿದ್ದಾರೆ.
ಬಳಿಕ ನಟಿ ನಯನತಾರ ತನ್ನ ಗೆಳೆಯ ವಿಘ್ನೇಶ್ ಶಿವನ್ ಅವರ ಕಥೆ ಕೇಳುವಂತೆ ವಿಜಯ್ ತಿಳಿಸಿದ್ದಾರೆ. ಆದರೆ ವಿಜಯ್ ಅದನ್ನು ನಿರಾಕರಿಸಿದ್ದು, ಇದರಿಂದ ನಟಿ ನಯನತಾರಾ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಆದರೆ ಇದೀಗ ವಿಜಯ್ ಅವರ ಮುಂದಿನ ಚಿತ್ರವನ್ನು ಕೋಲಮೌ ಕೋಕಿಲಾ ಮತ್ತು ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶಿಸಲಿದ್ದಾರೆ ಎಂಬುದು ಬಹತೇಕ ಖಚಿತವಾಗಿದೆ ಎನ್ನಲಾಗಿದೆ.