ಹೈದರಾಬಾದ್: ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಪುತ್ರಿ ಸಿತಾರಾ ಇತ್ತೀಚೆಗೆ ಆಭರಣಗಳ ಜಾಹೀರಾತೊಂದರಲ್ಲಿ ಕಾಣಿಸಿಕೊಂಡಿದ್ದರು.
ಅವರ ಫೋಟೋಗಳು ಟೈಮ್ಸ್ ಸ್ಕ್ವೇರ್ ನಲ್ಲೂ ಪ್ರದರ್ಶಿತಗೊಂಡಿದ್ದವು. ಈ ಜಾಹೀರಾತಿನಲ್ಲಿ ಅಭಿನಯಿಸಲು ಸಿತಾರಾ ಒಂದು ಕೋಟಿ ರೂ. ಸಂಭಾವನೆ ಪಡೆದಿದ್ದರು ಎನ್ನಲಾಗಿತ್ತು.
ಈ ಮೊದಲ ಸಂಭಾವನೆಯನ್ನು ಸಿತಾರಾ ಒಳ್ಳೆಯ ಕೆಲಸಕ್ಕೆ ವಿನಿಯೋಗಿಸಿದ್ದಾರಂತೆ. ಸಾಮಾಜಿಕ ಸೇವೆಯಲ್ಲಿ ತೊಡಗಸಿಕೊಂಡಿರುವ ಸಂಸ್ಥೆಯೊಂದಕ್ಕೆ ಸಿತಾರಾ ತಮ್ಮ ಮೊದಲ ಸಂಭಾವನೆಯನ್ನು ದೇಣಿಗೆಯಾಗಿ ನೀಡಿದ್ದಾರೆ. ಸಿತಾರಾ ಕೆಲಸಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.