Webdunia - Bharat's app for daily news and videos

Install App

ಕಣ್ಮರೆಯಾದ ಜೀವದ ಗೆಳೆಯ: ನಟ ಕಿಶೋರ್ ಭಾವುಕ ನುಡಿ

Sampriya
ಭಾನುವಾರ, 31 ಮಾರ್ಚ್ 2024 (15:49 IST)
Photo Courtesy X
ಬೆಂಗಳೂರು: ಹೃದಯಘಾತದಿಂದ ನಿಧನರಾದ ತಮಿಳಿನ ಖ್ಯಾತ ನಟ ಡೇನಿಯಲ್​ ಬಾಲಾಜಿ ನೆನೆದು ನಟ ಕಿಶೋರ್ ಭಾವುಕರಾಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಡೇನಿಯಲ್ ಜತೆಗಿನ ಸಂಬಂಧ ಬಗ್ಗೆ ಬರೆದುಕೊಂಡಿರುವ ಅವರು ನೀನಿಲ್ಲ ಎಂದು ಹೇಗೆ ನಂಬುವುದು. ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದೇನೆಂದು ಎಂದು ಭಾವುಕ ಮಾತುಗಳನ್ನಾಡಿದ್ದಾರೆ.

ಗುಡ್ ಬೈ ಬ್ರದರ್.. ವಿಲ್ ಮಿಸ್ ಯು ಪೊಲ್ಲಾದವನ್ ನಮಗೆಲ್ಲರಿಗೆ ಕೇವಲ ಸಿನಿಮಾ ಆಗಿರಲಿಲ್ಲ ಮನೆಯಾಗಿತ್ತು, ಕುಟುಂಬವಾಗಿತ್ತು. ನಿಯಮಿತವಾಗಿ ಯಾವುದೇ ಮಾತುಕತೆಯಿಲ್ಲದಿದ್ದರೂ ನಮ್ಮಲ್ಲಿ ಒಬ್ಬರ ಆಲೋಚನೆಗಳು, ಚಲನಚಿತ್ರಗಳು ಮತ್ತು ಯಶಸ್ಸಿನ ಬಗ್ಗೆ ಯಾವಾಗಲಾದರೂ ಬರುವ ಸುದ್ದಿ ಅಥವಾ ವೀಡಿಯೊವನ್ನು ನೋಡಿದಾಗ ನಮ್ಮ ಮುಖದಲ್ಲಿ ಮೂಡುವ ಆ ಮುಗುಳ್ನಗೆ ..ನಾವು ಪರಸ್ಪರರ ಬಗ್ಗೆ ಮಾತನಾಡುವಾಗ .. ಹೊಮ್ಮುವ ಆ ಹೆಮ್ಮೆಯ ಭಾವ ..ನಮ್ಮೊಂದಿಗೆ ಅಥವಾ ನಾವಿಲ್ಲದೆ ನಮ್ಮಲ್ಲಿ ಯಾರು ಯಾವ ಕೆಲಸ ಮಾಡಿದರೂ ನಾವು ಪಡುವ ಆ ಸಂತೋಷ  ಏನೆಂದು ಹೇಳಲಿ.

ನಾನು ಎಲ್ಲಿ ಹೋದರೂ ಜನ ಯಾವಾಗ ವಡಚೆನ್ನೈ -2 ಎಂದು ಕೇಳುತ್ತಲೇ ಇರುತ್ತಾರೆ .. ನಾನು ತಮಾಷೆಯಾಗಿ ಹೇಳುತ್ತಿರುತ್ತೇನೆ ವೆಟ್ರಿ ಒಪ್ಪಿಕೊಂಡಿರುವ ಸಿನಿಮಾಗಳ ಸಾಲು ನೋಡಿದರೆ ನಾವು 70 ವರ್ಷ ವಯಸ್ಸಿನವರಾದಾಗ ಮಾತ್ರ ಮಾಡಲು ಸಾಧ್ಯವಾಗಬಹುದು ಎಂದು ಆದರೆ ಈಗಲೂ ಅನಿಸುತ್ತಿದೆ ನಾನು ಕರೆ ಮಾಡಿದರೆ ಆ ಕಡೆಯಿಂದ ಆ ನಿನ್ನದೇ ಸ್ಟೈಲಿನ ಕೊರಳ ದನಿ ಕೇಳಬಹುದೇನೋ  ಅಣ್ಣಾ ಎಪ್ಪಡಿ ಇರುಕ್ಕೀಂಗ ಎಂದು ನೀನು ಹೇಳುವುದನ್ನು ಕೇಳಬೇಕು ಅನಿಸುತ್ತಿದೆ. ನಿನ್ನನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ ಸಹೋದರ ಎಂದು ನಟ ಕಿಶೋರ್​ ಬರೆದುಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Cannes 2025: ಮಗಳ ಜತೆ ಫ್ರಾನ್ಸ್‌ಗೆ ಬಂದಿಳಿದ ಐಶ್ವರ್ಯಾ ರೈ

Gold Smuggling Case:ಭಾರೀ ಷರತ್ತಿನೊಂದಿಗೆ ರನ್ಯಾ ರಾವ್‌ಗೆ ಸಿಕ್ತು ಜಾಮೀನು

ಈಚೆಗೆ ಆರೋಗ್ಯ ವಿಚಾರಕ್ಕೆ ಸುದ್ದಿಯಾಗಿದ್ದ ನಟ ವಿಶಾಲ್‌ಗೆ ಕೂಡಿ ಬಂತು ಕಂಕಣಭಾಗ್ಯ

Actor Darshan, ಪತ್ನಿ ಜತೆಗೆ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡು ಖುಷಿಯಲ್ಲಿದ್ದ ದರ್ಶನ್‌ಗೆ ದುಃಖದ ನ್ಯೂಸ್‌

Darshan, Pavithra Gowda: ಪವಿತ್ರಾ ಗೌಡ ಕೋರ್ಟ್ ಮುಂದೆ ಇಟ್ಟ ಹೊಸ ಬೇಡಿಕೆಯೇನು

ಮುಂದಿನ ಸುದ್ದಿ
Show comments