ಬಳ್ಳಾರಿ: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಈಗ ಬಳ್ಳಾರಿ ಜೈಲಿನಲ್ಲಿ ಸಾಕಷ್ಟು ಕಷ್ಟ ಅನುಭವಿಸುತ್ತಿದ್ದಾರೆ. ಈ ನಡುವೆ ಇಂದು ಅವರನ್ನು ವಕೀಲರು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪಡೆದ ತಪ್ಪಿಗೆ ದರ್ಶನ್ ರನ್ನು ಬಳ್ಳಾರಿ ಜೈಲಿಗೆ ಹಸ್ತಾಂತರಿಸಲಾಗಿತ್ತು. ಆದರೆ ಇಲ್ಲಿ ದರ್ಶನ್ ಗೆ ಯಾವುದೇ ವಿಐಪಿ ಟ್ರೀಟ್ ಮೆಂಟ್ ಸಿಗುತ್ತಿಲ್ಲ. ಒಂದು ಪ್ಲಾಸ್ಟಿಕ್ ಚೇರ್ ಗೂ ಅಂಗಲಾಚುವ ಸ್ಥಿತಿಯಾಗಿದೆ. ಕೋರ್ಟ್ ಮುಂದೆ ಹೇಳಿದರೆ ಜೈಲು ಅಧಿಕಾರಿಗಳಿಗೆ ಹೇಳಿ ಎನ್ನುತ್ತಿದ್ದಾರೆ. ಜೈಲು ಅಧಿಕಾರಿಗಳಿಗೆ ಕೇಳಿದರೆ ರೂಲ್ಸ್ ಮುಂದಿಡುತ್ತಿದ್ದಾರೆ.
ನಿನ್ನೆ ಪತ್ನಿ ವಿಜಯಲಕ್ಷ್ಮಿ ಭೇಟಿ ಮಾಡಿದ್ದಾಗ ದರ್ಶನ್ ಚೇರ್, ಹಾಸಿಗೆ, ದಿಂಬು ಕೊಡ್ತಿಲ್ಲ ಎಂದು ಸಮಸ್ಯೆ ತೋಡಿಕೊಂಡಿದ್ದರು. ಹೀಗಾಗಿ ಈ ಬಗ್ಗೆ ಲಾಯರ್ ಜೊತೆ ಮಾತುಕತೆ ನಡೆಸುವುದಾಗಿ ವಿಜಯಲಕ್ಷ್ಮಿ ಹೇಳಿದ್ದರು. ಅದರಂತೆ ಇಂದು ವಕೀಲರು ಜೈಲಿಗೆ ಭೇಟಿ ನೀಡುತ್ತಿದ್ದು, ಅವರ ಮುಂದೆಯೂ ದರ್ಶನ್ ಈ ವಿಚಾರ ಪ್ರಸ್ತಾಪ ಮಾಡುವ ಸಾಧ್ಯತೆಯಿದೆ.
ಇನ್ನೊಂದೆಡೆ ದರ್ಶನ್ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು ಪ್ರಮುಖವಾಗಿ ಆ ವಿಚಾರದ ಬಗ್ಗೆ ಮಾಹಿತಿ ನೀಡಲು ಜೈಲಿಗೆ ವಕೀಲರು ಭೇಟಿ ನೀಡುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಒಟ್ಟು 17 ಆರೋಪಿಗಳ ಪೈಕಿ ಮೂವರಿಗೆ ಜಾಮೀನು ಮಂಜೂರು ಮಾಡಲಾಗಿದೆ.