ಬೆಂಗಳೂರು: 'ಲಕ್ಷ್ಮೀ ಬಾರಮ್ಮ' ಧಾರವಾಹಿಯ ಖ್ಯಾತಿಯ ನಟ ಚಂದನ್ ಕುಮಾರ್ ಹಾಗೂ ಕವಿತಾ ಗೌಡ ಜೋಡಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಈ ಬಗ್ಗೆ ನಟಿ ಕವಿತಾ ಗೌಡ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಸ್ಕ್ಯಾನಿಂಗ್ ರಿಪೋರ್ಟ್ನ ಫೋಟೋ ಶೇರ್ ಮಾಡಿದ್ದಾರೆ. ಫೋಟೋದಲ್ಲಿ ಚಂದನ್ ಹಾಗೂ ಕವಿತಾ ಸ್ಕ್ಯಾನಿಂಗ್ ರಿಪೋರ್ಟ್ನ್ನು ಕೈಯಲ್ಲಿಟ್ಟು ಫೋಸ್ ನೀಡಿದ್ದಾರೆ. ಇದನ್ನು ನೋಡಿದ ಅವರ ಅಭಿಮಾನಿಗಳು ಶುಭಕೋರಿ, ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ.
ಕವಿತಾ ಗೌಡ ಮತ್ತು ಚಂದನ್ ಕುಮಾರ್ ಅವರು ಲಕ್ಷ್ಮಿ ಬಾರಮ್ಮ ಧಾರಾವಾಹಿಯಿಂದ ತುಂಬಾನೇ ಖ್ಯಾತಿ ಪಡೆದರು. ಅದಲ್ಲದೆ ಈ ಜೋಡಿ ಬಿಗ್ಬಾಸ್ ಮನೆಗೂ ಬೇರೆ ಬೇರೆ ಸೀಸನ್ನಲ್ಲಿ ಎಂಟ್ರಿ ಕೊಟ್ಟಿತು. ಧಾರವಾಹಿಯಲ್ಲಿ ಶುರುವಾದ ಇವರಿಬ್ಬರ ಸ್ನೇಹ , ಪ್ರೀತಿಯಾಗಿ ಮದುವೆಯಾಗಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿರುವ ಈ ಜೋಡಿ ಈಚೆಗೆ ಹೊಟೇಲ್ ಉದ್ಯಮ ಶುರುಮಾಡಿದ್ದಾರೆ. ಮೈಸೂರು ಮಂಡಿಪೇಟೆನಲ್ಲಿ ಹೋಟೆಲ್ ಆರಂಭ ಮಾಡಿರುವ ಜೋಡಿ ಯಶಸ್ವಿಯಾಗಿ ಇದೀಗ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.