ಬೆಂಗಳೂರು: ಸಚಿವ ಜಮೀರ್ ಖಾನ್ ಅವರ ಪುತ್ರ ಝೈದ್ ಖಾನ್ ಅವರು ನಾಯಕನಾಗಿ ನಟಿಸಲಿರುವ ಹೊಸ ಸಿನಿಮಾದ ಮುಹೂರ್ತ ಅದ್ಧೂರಿಯಾಗಿ ನೆರವೇರಿತು. ನಿರ್ದೇಶಕ ಅನಿಲ್ ಕುಮಾರ್ ನಿರ್ದೇಶನದ 'ಕಲ್ಟ್' ಚಿತ್ರದ ಮುಹೂರ್ತ ಮಹಾಲಕ್ಷ್ಮೀ ಲೇಜೌಟ್ನಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಗೌರಿಹಬ್ಬದ ಶುಭದಿನದಂದು ನೆರವೇರಿತು.
ಈ ಸಂದರ್ಭದಲ್ಲಿ ನಟ ಝೈದ್ ಖಾನ್ ಅವರು ಹಣೆಗೆ ತಿಲಕವಿಟ್ಟು ನಟಿಯರಾದ ರಚಿತಾ ರಾಮ್, ಮಲೈಕಾ ಜತೆ ಫೋಟೋಗೆ ಫೋಸ್ ಕೊಟ್ಟರು. ಇದನ್ನು ನೋಡಿದ ನೆಟ್ಟಿಗರು ಝೈದ್ ಅವರು ಹಿಂದೂ ಸಂಪ್ರದಾಯಕ್ಕೆ ನೀಡಿರುವ ಗೌರವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬನಾರಸ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಝೈದ್ ಖಾನ್ ಅವರು ಇದೀಗ ಅವರ ಎರಡನೇ ಸಿನಿಮಾ ಅಧಿಕೃತವಾಗಿ ಅನೌನ್ಸ್ ಮಾಡಲಾಗಿದೆ. ರಂಗಾಯಣ ರಘು, ಅಚ್ಯುತ ಕುಮಾರ್ ಸೇರಿದಂತೆ ದೊಡ್ಡ ತಾರಾ ಬಳಗವನ್ನು ಹೊಂದಿದೆ.
ಕಲ್ಟಿಸಂ ಎಂಬ ಶಬ್ದವನ್ನು ಈಗಿನ ಯುವಜನತೆ ಕಲ್ಟ್ ಎಂದು ಹೆಚ್ಚಾಗಿ ಸಂಬೋಧಿಸುತ್ತಾರೆ. ಹಾಗಾಗಿ ಯವಜನತೆಗೆ ಹತ್ತಿರವಾಗಿರುವ ಕಥೆಯುಳ್ಳ ಈ ಚಿತ್ರಕ್ಕೆ ಕಲ್ಟ್ ಎಂದು ಶೀರ್ಷಿಕೆಯಿಟ್ಟಿರುವುದಾಗಿ ನಿರ್ದೇಶಕರು ತಿಳಿಸಿದ್ದಾರೆ.