ಮುಂಬೈ: ಬಾಲಿವುಡ್ ನಟಿ, ಮಾಡೆಲ್ ಅಥಿಯಾ ಶೆಟ್ಟಿ ಆಗಾಗ ಸ್ಟೈಲಿಶ್ ಲುಕ್ನೊಂದಿಗೆ ಅಭಿಮಾನಿಗಳ ಮುಂದೆ ಬರುತ್ತಿರುತ್ತಾರೆ. ಫ್ಯಾಷನ್ನಲ್ಲಿ ಉತ್ತಮ ಅಭಿರುಚಿಯನ್ನು ಹೊಂದಿರುವ ಅಥಿಯಾ ಆಗಾಗ್ಗೆ ತನ್ನ ಪತಿ ಕೆಎಲ್ ರಾಹುಲ್ ಅವರ ಟೀ ಶರ್ಟ್ಗಳು ಮತ್ತು ಸ್ವೆಟ್ಶರ್ಟ್ಗಳನ್ನು ನವೀಕರಿಸುವುದು ಗೊತ್ತಿದೆ. ಆದರೆ ಇದೀಗ ಆಥಿಯಾ ತನ್ನ ತಂದೆಯ ಸೂಟ್ಗೆ ಕತ್ತರಿ ಹಾಕಿದ್ದಾರೆ.
ಆಥಿಯಾ ತಮ್ಮ ತಂದೆಯ ಸೂಟ್ ಕದ್ದು ತನಗೆ ಬೇಕಾದ ಹಾಗೇ ಬದಲಾಯಿಸಿ ಫೋಟೋಗೆ ಫೋಸ್ ನೀಡಿದ್ದಾರೆ.
ತಂದೆ ಸುನೀಲ್ ಶೆಟ್ಟಿ ಅವರ ವಿಂಟೇಜ್ ಸೂಟ್ ಅನ್ನು ಬದಲಾಯಿಸಿದ ಆಥಿಯಾ ಶೆಟ್ಟಿ, ಸ್ಟೈಲಿಶ್ ಆಗಿ ಫೋಸ್ ನೀಡಿದ್ದಾರೆ. ಫೋಟೋಗಳನ್ನು ಅವರು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು, ಅದರಲ್ಲಿ ತಂದೆಯ ಸೂಟ್ ಅನ್ನು ಕದ್ದು ಈ ರೀತಿ ಬದಲಾಯಿಸಿರುವುದಾಗಿ ಹೇಳಿಕೊಂಡಿದ್ದಾರೆ.
ನಿಸ್ಸಂಶಯವಾಗಿ ನಾವು ಸುನೀಲ್ ಶೆಟ್ಟಿ ಸೂಟ್ ಅನ್ನು ಕದ್ದು, ಈ ರೀತಿ ಬದಲಾಯಿಸಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಈ ಲುಕ್ನಲ್ಲಿ ಅಥಿಯಾ ತನ್ನ ಅಭಿಮಾನಿಗಳಿಗೆ ಸ್ಟ್ರೈಪ್ಗಳೊಂದಿಗೆ ಬೀಜ್ ಸೂಟ್ನಲ್ಲಿ ಬಾಸ್ ಲೇಡಿ ವೈಬ್ಗಳನ್ನು ನೀಡಿದ್ದಾರೆ.
ಬಿಳಿ ಟಾಪ್ಗೆ ಬ್ಲೇಜರ್ ಅನ್ನು ಧರಿಸಿದ್ದಾರೆ.