Publish Date: Wed, 30 Jun 2021 (09:26 IST)
Updated Date: Wed, 30 Jun 2021 (09:27 IST)
ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ-ರಶ್ಮಿಕಾ ಮಂದಣ್ಣ ಅಭಿನಯದ ಕಿರಿಕ್ ಪಾರ್ಟಿ ಹಾಡೊಂದರ ಬಗ್ಗೆ ಲಹರಿ ಸಂಸ್ಥೆ ಜೊತೆಗಿದ್ದ ಹಕ್ಕು ಚ್ಯುತಿ ವಿವಾದ ಈಗ ಸುಖಾಂತ್ಯವಾಗಿದೆ.
ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಬಳಸಿದ್ದ ಹಾಡೊಂದರಲ್ಲಿ ಶಾಂತಿ ಕ್ರಾಂತಿ ಹಾಡಿನ ತುಣುಕು ಬಳಸಿದ್ದರ ವಿರುದ್ಧ ಲಹರಿ ಸಂಸ್ಥೆ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ರಕ್ಷಿತ್ ಶೆಟ್ಟಿ-ಲಹರಿ ವೇಣು ಜೊತೆಯಾಗಿ ಕೂತು ಮಾತುಕತೆ ನಡೆಸಿ ವಿವಾದಕ್ಕೆ ಮಂಗಳ ಹಾಡಿದ್ದಾರೆ.
ಈ ಬಗ್ಗೆ ರಕ್ಷಿತ್ ಶೆಟ್ಟಿ ಟ್ವಿಟರ್ ಮೂಲಕ ಸಂತೋಷ ಹಂಚಿಕೊಂಡಿದ್ದಾರೆ. ಸದ್ಯದಲ್ಲೇ ಕೇಸ್ ವಾಪಸ್ ಪಡೆದುಕೊಳ್ಳುವುದಾಗಿ ಲಹರಿ ವೇಣು ಭರವಸೆ ನೀಡಿದ್ದಾರೆ ಎನ್ನಲಾಗಿದೆ.