Publish Date: Wed, 19 Jul 2023 (09:10 IST)
Updated Date: Wed, 19 Jul 2023 (09:17 IST)
ಬೆಂಗಳೂರು: ಕಿಚ್ಚ ಸುದೀಪ್ ಮತ್ತು ನಿರ್ಮಾಪಕ ಎಂಎನ್ ಕುಮಾರ್ ನಡುವೆ ನಡೆಯುತ್ತಿರುವ ವಿವಾದ ಈಗ ತಾರಕಕ್ಕೇರಿದೆ. ಇಬ್ಬರ ಪರ ಈಗ ಮತ್ತಷ್ಟು ಜನ ಸೇರಿಕೊಂಡು ಎರಡು ಬಣಗಳಾಗಿವೆ.
ಕಿಚ್ಚ ಸುದೀಪ್ ನನ್ನ ಮಗ. ಅವನನ್ನು ಕೈ ಬಿಡಲ್ಲ ಎಂದು ನಿನ್ನೆ ಕ್ರೇಜಿಸ್ಟಾರ್ ರವಿಚಂದ್ರನ್ ಹೇಳಿಕೆ ನೀಡಿದ್ದರು. ಅಲ್ಲದೆ, ಕುಮಾರ್ ಕರೆಸಿ ಮಾತನಾಡಲೂ ಸಿದ್ಧ ಎಂದಿದ್ದರು.
ಇದೀಗ ಕುಮಾರ್ ಪರ ನಿರ್ಮಾಪಕರು ನಿಂತಿದ್ದಾರೆ. ನಿರ್ಮಾಪಕ ಸಾರಾ ಗೋವಿಂದು ಕುಮಾರ್ ಪರವಾಗಿ ಮಾತನಾಡಿದ್ದು, ಚಿತ್ರರಂಗದ ವಿವಾದಗಳು ನ್ಯಾಯಾಲಯದ ಮೆಟ್ಟಿಲೇರಬಾರದು, ವಾಣಿಜ್ಯ ಮಂಡಳಿಯಲ್ಲಿ ತೀರ್ಮಾನವಾಗಬೇಕು ಎಂದಿದ್ದಾರೆ. ಇದರ ಬೆನ್ನಲ್ಲೇ ಕುಮಾರ್ ರವಿಚಂದ್ರನ್ ಮತ್ತು ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗಲು ತೀರ್ಮಾನಿಸಿದ್ದಾರೆ. ಇಬ್ಬರ ಮೇಲೂ ಸುದೀಪ್ ಗೆ ಅಪಾರ ಗೌರವವಿದೆ. ಹೀಗಾಗಿ ಇಬ್ಬರ ಮಾತಿಗೆ ಮನ್ನಣೆ ನೀಡಿ ಕುಮಾರ್ ವಿರುದ್ಧ ನೀಡಿರುವ ಮಾನನಷ್ಟ ಮೊಕದ್ದಮೆಯನ್ನು ವಾಪಸ್ ಪಡೆಯುತ್ತಾರಾ ಕಾದುನೋಡಬೇಕಿದೆ.