Publish Date: Mon, 19 Apr 2021 (09:55 IST)
Updated Date: Mon, 19 Apr 2021 (09:56 IST)
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೂರು ಪಂದ್ಯಗಳ ಪೈಕಿ ಮೂರನ್ನೂ ಗೆದ್ದು ಟಾಪ್ ಸ್ಥಾನದಲ್ಲಿರುವುದು ಎಲ್ಲರ ಖುಷಿಗೆ ಕಾರಣವಾಗಿದೆ.
ಕ್ರಿಕೆಟ್ ಪ್ರಿಯರಾಗಿರುವ ನಟ ಕಿಚ್ಚ ಸುದೀಪ್ ಆರ್ ಸಿಬಿ ಪ್ರದರ್ಶನದಿಂದ ಖುಷಿಯಾಗಿದ್ದು, ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಆರ್ ಸಿಬಿ ಎಂದರೆ ಇದು, ಹೀಗೇ ಇರ್ಬೇಕು ಎಂದು ಆಶಿಸಿದ್ದಾರೆ.
ಮೂರು ಪಂದ್ಯಗಳಲ್ಲಿ ಮೂರೂ ಗೆಲುವು. ಹೀಗೇ ಮುಂದುವರಿಯಲಿ. ಈಗಾಗಲೇ ಗಟ್ಟಿ ಫೌಂಡೇಷನ್ ಹಾಕಿದ್ದೀರಿ. ಇದನ್ನೇ ಮುಂದುವರಿಸಿಕೊಂಡು ನಾಕೌಟ್ ಹಂತಕ್ಕೆ ತಲುಪುವುದು ಮುಖ್ಯ. ಮುಂದಿನ ಪಂದ್ಯಗಳಿಗೆ ಬೆಸ್ಟ್ ಆಫ್ ಲಕ್ ಎಂದು ಸುದೀಪ್ ಹೇಳಿದ್ದಾರೆ.