Select Your Language

Notifications

webdunia
webdunia
webdunia
webdunia

ವಿಷ್ಣು ಸ್ಮಾರಕಕ್ಕೆ ಕಿಚ್ಚ ಜಾಗ ಕೊಟ್ರೇ, ಅಭಿಮಾನಿಗಳ ಸಂಘಟನೆ ಹೈಕೋರ್ಟ್ ಗೆ ಹೋಗೋದಾ

ಕಿಚ್ಚ ಸುದೀಪ್

Sampriya

ಬೆಂಗಳೂರು , ಮಂಗಳವಾರ, 19 ಆಗಸ್ಟ್ 2025 (22:19 IST)
Photo Credit X
ಬೆಂಗಳೂರು:  ಕಿಚ್ಚ ಸುದೀಪ್ ಅಭಿಮಾನಿಗಳ ಜೊತೆ ಸೇರಿಕೊಂಡು ಪರ್ಯಾಯ ವಿಷ್ಣು ಸ್ಮಾರಕ‌‌ ನಿರ್ಮಾಣಕ್ಕೆ ಮುಂದಾದ್ರೆ, ಮತ್ತೊಂದೆಡೆ  ವಿಷ್ಣುವರ್ಧನ್ ಅಭಿಮಾನಿಗಳ ಸಂಘಟನೆಗಳು ಹೈಕೋರ್ಟ್‌ಗೆ ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸಿ ನೆಲಸಮವಾದ ಜಾಗದಲ್ಲೇ ಮರು ನಿರ್ಮಾಣ ಮಾಡಲು ಮುಂದಾಗಿದೆ.

ಸೋಮವಾರವಷ್ಟೇ ಹೈಕೋರ್ಟ್‌ಗೆ ವಿಷ್ಣುಸೇನೆಯು ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸಿದ್ದು, ಅಭಿಮಾನ್ ಸ್ಟುಡಿಯೋದಲ್ಲಿ ಬೇರೆ ಕೆಲಸಗಳಿಗೂ ತಡೆಯಾಜ್ಞೆ ಹೇರಲಾಗಿದೆ.

ಸರ್ಕಾರ ಯಾವ ಉದ್ದೇಶದಲ್ಲಿ ಬಾಲಣ್ಣ ಅವರಿಗೆ ಜಾಗ ನೀಡಿತ್ತೋ ಆ ಕೆಲಸಕ್ಕೆ ಉಪಯೋಗವಾಗದೆ ವ್ಯವಹಾರಿಕವಾಗಿ ಲಾಭದಾಸೆಗೆ ಬಾಲಣ್ಣ ಕುಟುಂಬ ಪ್ಲ್ಯಾನ್ ಮಾಡಿರೋದು ಬೇಸರ ತಂದಿದೆ.

ಜೊತೆಗೆ 10 ಗುಂಟೆ ಜಾಗವನ್ನ ವಾಪಸ್ ಪಡೆಯುವುದು, ಜೊತೆಗೆ ಸಮಾಧಿ ಮರುಸ್ಥಾಪನೆಗೆ ಅವಕಾಶ ಕೋರಿ ಅರ್ಜಿ ಸಲ್ಲಿಸಲಾಗಿದೆ.‌ 

ಇದೀಗ ಸ್ಮಾರಕ ತೆರವುಗೊಳಿಸಿ ಹತ್ತು ದಿನಗಳೇ ಉರುಳಿದೆ. ಸೆಪ್ಟೆಂಬರ್ 18ರಂದು ನಡೆಯಬೇಕಿದ್ದ ವಿಷ್ಣುವರ್ಧನ್ 75ನೇ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ  ಭಾರೀ ಬೇಸರ ತಂದಿದ್ದು, ಇದೀಗ  ಸಮಾಧಿ ತೆರವು ಮಾಡಿರುವ ಜಾಗದಲ್ಲಿ ಸಮಾಧಿ ಮರುಸ್ಥಾಪನೆ ಹಾಗೂ ಪರ್ಯಾಯ ಸ್ಮಾರಕ ಸ್ಥಾಪನೆಯೂ ಜಂಟಿಯಾಗಿ ನಡೆಯುತ್ತಿದೆ

Share this Story:

Follow Webdunia kannada

ಮುಂದಿನ ಸುದ್ದಿ

ರಮ್ಯಾಗೆ ಅಶ್ಲೀಲ ಮೆಸೇಜ್‌, ಜೀವಬೆದರಿಕೆ ಪ್ರಕರಣ: ತನಿಖೆಯಲ್ಲಿ ಭಾರೀ ಬೆಳವಣಿಗೆ