ಬೆಂಗಳೂರು: ಕಿಚ್ಚ ಸುದೀಪ್ ಫ್ಯಾಂಟಮ್ ಸಿನಿಮಾ ಹೈದರಾಬಾದ್ ನಲ್ಲಿ ಶೂಟಿಂಗ್ ಆರಂಭವಾಗಿದ್ದು, ವಿಶಿಷ್ಟ ವಿಡಿಯೋ ಮೂಲಕ ಕಿಚ್ಚ ಅಭಿಮಾನಿಗಳ ಕುತೂಹಲ ಕೆರಳಿಸಿದ್ದಾರೆ.
ಲಾಕ್ ಡೌನ್ ಬಳಿಕ ಕಿಚ್ಚ ಇದೇ ಮೊದಲ ಬಾರಿಗೆ ಶೂಟಿಂಗ್ ಗೆ ಹಾಜರಾಗಿದ್ದಾರೆ. ಹೀಗಾಗಿ ಸುದೀರ್ಘ ರಜೆಯ ಬಳಿಕ ಮೇಕಪ್ ಹಾಕಿಕೊಂಡ ಫೀಲ್ ಆಗ್ತಿದೆ ಎಂದಿದ್ದಾರೆ.
ಅಲ್ಲದೆ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಇದರಲ್ಲಿ ಮಗುವಿನೊಂದಿಗೆ ಕಾಡಿನ ಸೆಟ್ ನಲ್ಲಿ ಕಿಚ್ಚ ಬರುತ್ತಿರುವ ಸೀನ್ ಒಂದನ್ನು ತೋರಿಸಲಾಗಿದೆ. ಜತೆಗೆ ಹಿನ್ನಲೆಯಲ್ಲಿ ‘ಗುಮ್ಮ ಬಂದ ಗುಮ್ಮ ಗುಮ್ಮ’ ಎಂಬ ವಿಶಿಷ್ಟ ಹಿನ್ನಲೆ ಸಂಗೀತ ಬರುತ್ತಿದೆ. ಇದನ್ನು ನೋಡಿ ಕಿಚ್ಚನ ಅಭಿಮಾನಿಗಳಲ್ಲಿ ಚಿತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ.
ಇನ್ನು, ಸುದೀಪ್ ತಮ್ಮ ಭಾಗದ ಚಿತ್ರೀಕರಣ ಪ್ರಾರಂಭಿಸಿದ್ದಾರೆ ಎಂದು ನಿರ್ದೇಶಕ ಅನೂಪ್ ಭಂಡಾರಿ ಕೂಡಾ ತಿಳಿಸಿದ್ದಾರೆ. ವಿಕ್ರಮ್ ರೋಣ ಕಮ್ ಬ್ಯಾಕ್ ಎಂದು ಅನೂಪ್ ಟ್ವೀಟ್ ಮಾಡಿದ್ದಾರೆ.