Publish Date: Sun, 16 Dec 2018 (09:22 IST)
Updated Date: Sun, 16 Dec 2018 (09:25 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗುತ್ತಿವೆ. ಇದೀಗ ನಿನ್ನೆಯಷ್ಟೇ ಬಿಡುಗಡೆಯಾದ ತಮನ್ನಾ-ಯಶ್ ಹೆಜ್ಜೆ ಹಾಕಿದ ಜೋಕೆ ಹಾಡು ಭಾರೀ ಲೈಕ್ಸ್ ಪಡೆದಿವೆ.
ತಮನ್ನಾ ಜತೆ ರಾಕಿಂಗ್ ಸ್ಟಾರ್ ಯಶ್ ಹೆಜ್ಜೆ ಹಾಕಿರುವ ಜೋಕೆ ಹಾಡಿಗೆ ಬಿಡುಗಡೆಯಾದ 24 ಗಂಟೆಯೊಳಗೆ 34 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿದ್ದು, 6 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ.
ಇದೇ ಹಾಡಿನ ತೆಲುಗು ಮತ್ತು ತಮಿಳು ವರ್ಷನ್ ಈಗಾಗಲೇ ಭಾರೀ ಲೈಕ್ಸ್ ಪಡೆದು ದಾಖಲೆ ಮಾಡಿತ್ತು. ಇದೀಗ ಕನ್ನಡ ಹಾಡು ಕೂಡಾ ಭಾರೀ ದಾಖಲೆ ಮಾಡುವತ್ತ ದಾಪುಗಾಲಿಟ್ಟಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ