Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹಲ್ಲೆ ಅಪಾದನೆ ಬಗ್ಗೆ ಕೊನೆಗೂ ಮೌನ ಮುರಿದ ಕೆಜಿಎಫ್‌ ನಟಿ ರವೀನಾ ಟಂಡನ್

Raveena

sampriya

ಮುಂಬೈ , ಸೋಮವಾರ, 3 ಜೂನ್ 2024 (16:36 IST)
Photo By Instagram
ಮುಂಬೈ: ವೃದ್ಧೆ ಹಾಗೂ ಆಕೆಯ ಕುಟುಂಬದ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ ಆರೋಪ ಹೊತ್ತಿದ್ದ ಬಾಲಿವುಡ್‌ ನಟಿ ರವೀನಾ ಟಂಡನ್ ಕೊನೆಗೂ ಘಟನೆ ಬಗ್ಗೆ ಮೌನ ಮುರಿದಿದ್ದಾರೆ. ನಟಿ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿನಲ್ಲಿ ನಡೆದ ಘಟನೆಯಲ್ಲಿ ತನ್ನ ತಪ್ಪು ಇಲ್ಲ ಎಂಬುದಾಗಿ ಸ್ಟೋರಿ ಹಾಕಿಕೊಂಡಿದ್ದಾರೆ.

ಖಾರ್ ಪೊಲೀಸ್ ಅಧಿಕಾರಿಯ ಪ್ರಕಾರ, ಸಿಸಿಟಿವಿಯಲ್ಲಿ ನಟಿ  ರವೀನಾ ಅವರಿದ್ದ ಕಾರು ಆರೋಪ ಮಾಡಿದವರ ವಾಹನಕ್ಕೆ ಮುಖಾಮುಖಿಯಾಗಿದೆ, ಬಿಟ್ಟರೆ ಡಿಕ್ಕಿಯಾಗಿಲ್ಲ. ಅದಲ್ಲದೆ ಮಹಿಳೆಯ ಮೇಲೂ ಹಲ್ಲೆ ನಡೆಸಿಲ್ಲ ಎಂದು ಹೇಳಿದ್ದಾರೆ. 

ಶನಿವಾರ ರಾತ್ರಿ ಬಾಂದ್ರಾದ ಕಾರ್ಟರ್ ರಸ್ತೆಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಯಾವುದೇ ಎಫ್‌ಐಆರ್ ದಾಖಲಾಗಿಲ್ಲವಾದರೂ, ಖಾರ್ ಪೊಲೀಸ್ ಠಾಣೆಯಲ್ಲಿ ಸ್ಟೇಷನ್ ಡೈರಿ ನಮೂದು ಮಾಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಇನ್ನೂ ಮಹಿಳೆಯರ ಜತೆ ಮಾತನಾಡಲು ಕಾರಿನಿಂದ ಇಳಿದ ನಟಿ ರವೀನಾ ಅವರನ್ನು ಅಲ್ಲಿ ನೆರೆದ ಜನರು ತಳ್ಳಿದ್ದಾರೆ.  ವೈರಲ್ ಆಗಿರುವ ವಿಡಿಯೋದಲ್ಲಿ ರವೀನಾ ‘ದಯವಿಟ್ಟು ನನ್ನನ್ನು ಹೊಡೆಯಬೇಡಿ’ ಎಂದು ಹೇಳುತ್ತಿರುವುದು ಕೇಳಿಬರುತ್ತಿದೆ.

ವೀಡಿಯೋದಲ್ಲಿ, ನಟಿ ಕುಡಿದ ಅಮಲಿನಲ್ಲಿದ್ದ ಎಂದು ವ್ಯಕ್ತಿ ಹೇಳಿಕೊಂಡಿದ್ದಾನೆ ಮತ್ತು ಕಾರಿನಿಂದ ಇಳಿದ ನಂತರ  ನಟಿ ಹಲ್ಲೆಗೆ ಮಾಡಿದ್ದಳು ಎಂದು ಆರೋಪಿಸಿದ್ದರು.


Share this Story:

Follow Webdunia kannada

ಮುಂದಿನ ಸುದ್ದಿ

ಸಿನಿಮಾ ಹೀರೋ ಆಗಬೇಕೆಂದಿದ್ದ ನಿನಗಾಗಿ ಹೀರೋ: ದುಡ್ಡಿಗಾಗಿ ರೋಡ್ ಬದಿ ಚಹಾ ಮಾರಿದ್ದ ರಿತ್ವಿಕ್