Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಕೆಜಿಎಫ್ 2 ಸಿನಿಮಾದ ಮತ್ತೊಂದು ಹಾಡು ಇಂದು ಮಧ್ಯಾಹ್ನ ಲಾಂಚ್ ಆಗುತ್ತಿದೆ.
ಈಗಾಗಲೇ ಮೊದಲ ಹಾಡು ತೂಫಾನ್ ಬಿಡುಗಡೆಯಾಗಿ ಭರ್ಜರಿ ಹಿಟ್ ಆಗಿತ್ತು. ಇದೀಗ ಎರಡನೇ ಹಾಡು ಇಂದು ಮಧ್ಯಾಹ್ನ 1.00 ಗಂಟೆಗೆ ಬಿಡುಗಡೆಯಾಗಲಿದೆ.
ಗಗನ ನೀ ಎಂಬ ಅಮ್ಮನ ಕುರಿತಾದ ಹಾಡಿನ ಲಿರಿಕಲ್ ವಿಡಿಯೋ ಇಂದು ಬಿಡುಗಡೆಯಾಗುತ್ತಿದೆ. ಕೆಜಿಎಫ್ 1 ನಲ್ಲೂ ಅಮ್ಮನ ಕುರಿತಾದ ಭಾವುಕ ಹಾಡು ಭಾರೀ ಜನಪ್ರಿಯವಾಗಿತ್ತು. ಇದೀಗ ಎರಡನೇ ಭಾಗದಲ್ಲೂ ಅಂತಹದ್ದೇ ಹಾಡಿದೆ.