Publish Date: Thu, 14 Apr 2022 (08:25 IST)
Updated Date: Thu, 14 Apr 2022 (08:27 IST)
ಬೆಂಗಳೂರು: ಅಂತೂ ಇಂತೂ ಫ್ಯಾನ್ಸ್ ಬಹುದಿನಗಳಿಂದ ಕಾಯತ್ತಿದ್ದ ಗಳಿಗೆ ಬಂದೇ ಬಿಟ್ಟಿತು. ಕೆಜಿಎಫ್ 2 ಸಿನಿಮಾ ಇಂದಿನಿಂದ ವಿಶ್ವದಾದ್ಯಂತ ಬಿಡುಗಡೆಯಾಗಿದೆ.
ಮಧ್ಯರಾತ್ರಿಯಿಂದಲೇ ಶೋ ಆರಂಭವಾಗಿದ್ದು, ವಿಶ್ವದಾದ್ಯಂತ 10 ಸಾವಿರಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಕೆಜಿಎಫ್ 2 ರಿಲೀಸ್ ಆಗುತ್ತಿದೆ. ಇದು ಸಿನಿಮಾ ರಂಗದ ಮಟ್ಟಿಗೆ ದಾಖಲೆಯೇ ಸರಿ. ಹೀಗಾಗಿ ಚಿತ್ರ ಮೊದಲ ದಿನವೇ 100 ಕೋಟಿ ಕ್ಲಬ್ ಸೇರಿದರೂ ಅಚ್ಚರಿಯಿಲ್ಲ.
ಕೆಜಿಎಫ್ 2 ಸಿನಿಮಾ ಸ್ಯಾಂಡಲ್ ವುಡ್ ಪಾಲಿಗೆ ಗರಿಮೆಯಾಗಿದ್ದು, ಕನ್ನಡದ ಸ್ಟಾರ್ ಗಳೂ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ರಾಘವೇಂದ್ರ ರಾಜ್ ಕುಮಾರ್, ರಿಷಬ್ ಶೆಟ್ಟಿ, ನಿರ್ದೇಶಕ ಹೇಮಂತ್ ರಾವ್, ಸಂತೋಷ್ ಆನಂದ್ ರಾಮ್, ಶ್ರೀಕಾಂತ್ ಕೆ.ಪಿ. ನಟ ರಿಷಿ, ಎಪಿ ಅರ್ಜುನ್, ಯುವ ರಾಜ್ ಕುಮಾರ್, ಸಾಯಿ ಧರ್ಮ್ ತೇಜ್ ಸೇರಿದಂತೆ ಅನೇಕರು ಚಿತ್ರ ಯಶಸ್ವಿಯಾಗಲೆಂದು ಹಾರೈಸಿದ್ದಾರೆ.
Krishnaveni K
Publish Date: Thu, 14 Apr 2022 (08:25 IST)
Updated Date: Thu, 14 Apr 2022 (08:27 IST)