Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಲಯಾಳಂನಂತೆ ತೆಲುಗಿನಲ್ಲೂ ಮಿಟೂ ಕೇಸ್: ಸಮಂತಾ ಋತು ಪ್ರಭು ಮಾತಿನ ಮರ್ಮವೇನು

ಮಲಯಾಳಂನಂತೆ ತೆಲುಗಿನಲ್ಲೂ ಮಿಟೂ ಕೇಸ್: ಸಮಂತಾ ಋತು ಪ್ರಭು ಮಾತಿನ ಮರ್ಮವೇನು

Sampriya

ಆಂಧ್ರಪ್ರದೇಶ , ಶನಿವಾರ, 31 ಆಗಸ್ಟ್ 2024 (16:52 IST)
Photo Courtesy X
ಆಂಧ್ರಪ್ರದೇಶ:  ಕೇರಳ ಸರ್ಕಾರ ಬಿಡುಗಡೆ ಮಾಡಿದ ಮಲಯಾಳಂ ಚಿತ್ರರಂಗದ ಹೇಮಾ ಸಮಿತಿ ವರದಿಯನ್ನು ನಟಿ ಸಮಂತಾ ರುತ್ ಪ್ರಭು ಅವರು ಶ್ಲಾಘಿಸಿದ್ದಾರೆ.

ಅದಲ್ಲದೆ ತೆಲುಗು ಚಲನಚಿತ್ರೋದ್ಯಮದಲ್ಲಿರುವ ಲೈಂಗಿಕ ಕಿರುಕುಳದ ಬಗ್ಗೆ ಇದೇ ರೀತಿಯ ವರದಿಯನ್ನು ಪ್ರಕಟಿಸಲು ತೆಲಂಗಾಣ ಸರ್ಕಾರ ಮುಂದಾಗಬೇಕೆಂದು ಸಮಂತಾ ಒತ್ತಾಯಿಸಿದ್ದಾರೆ. ತೆಲಂಗಾಣ ಸರ್ಕಾರ ಕೇರಳ ಮಾದರಿಯ ಸಮಿತಿಯನ್ನು ರಚಿಸಿದರೆ ಟಾಲಿವುಡ್‌ಗೆ ಹೆಚ್ಚಿನ ಲಾಭವಾಗಲಿದೆ. ಇದರಿಂದ ಮಹಿಳೆಯರು ತಾವು ಕೆಲಸ ಮಾಡುವ ಸ್ಥಳದಲ್ಲಿ ಸುರಕ್ಷತೆಯನ್ನು ಮತ್ತಷ್ಟು ನೀಡುತ್ತದೆ  ಎಂದು ಸಮಂತಾ ಹೇಳಿದ್ದಾರೆ.

"ನಾವು, ತೆಲುಗು ಚಿತ್ರರಂಗದ ಮಹಿಳೆಯರು, ಹೇಮಾ ಸಮಿತಿಯ ವರದಿಯನ್ನು ಸ್ವಾಗತಿಸುತ್ತೇವೆ ಮತ್ತು ಕೇರಳದ ಡಬ್ಲ್ಯುಸಿಸಿಯ ನಿರಂತರ ಪ್ರಯತ್ನಗಳನ್ನು ಶ್ಲಾಘಿಸುತ್ತೇವೆ" ಎಂದು ಸಮಂತಾ ಇನ್‌ಸ್ಟಾಗ್ರಾಂನ ಸ್ಟೋರಿಯಲ್ಲಿ ತಿಳಿಸಿದ್ದಾರೆ.

"ಟಿಎಫ್‌ಐ (ತೆಲುಗು ಚಲನಚಿತ್ರೋದ್ಯಮ)ದಲ್ಲಿ ಮಹಿಳೆಯರಿಗೆ ಸುರಕ್ಷಿತ ಕೆಲಸದ ವಾತಾವರಣವನ್ನು ಸ್ಥಾಪಿಸಲು ಸರ್ಕಾರ ಮತ್ತು ಉದ್ಯಮದ ನೀತಿಗಳನ್ನು ರೂಪಿಸಲು ಸಹಾಯ ಮಾಡುವ ಲೈಂಗಿಕ ಕಿರುಕುಳದ ಕುರಿತು ಸಲ್ಲಿಸಿದ ಉಪ ಸಮಿತಿಯ ವರದಿಯನ್ನು ಪ್ರಕಟಿಸಲು ನಾವು ತೆಲಂಗಾಣ ಸರ್ಕಾರವನ್ನು ಈ ಮೂಲಕ ಒತ್ತಾಯಿಸುತ್ತೇವೆ" ಎಂದು ಅವರು ಹೇಳಿದರು.

ಸದ್ಯ ಮಲಯಾಳಂ ಚಿತ್ರರಂಗದಲ್ಲಿ ಬಿಡುಗಡೆಯಾದ ಹೇಮಾ ಸಮಿತಿ ವರದಿಯಿಂದ ಅನೇಕ ನಟ, ನಿರ್ದೇಶಕರ ಮೇಲೆ ಲೈಂಗಿಕ ದೌರ್ಜನ್ಯ ಆರೋಪಗಳು ಕೇಳಿಬಂದಿವೆ, ಅದಲ್ಲದೆ ಪ್ರಕರಣ ದಾಖಲಿಸಲಾಗಿದೆ. ಇದು ಒಳ್ಳೆಯ ಎಂದು ಅನೇಕ ನಟಿಯರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಸಮಂತಾ ಅವರು ಹೇಮಾ ಸಮಿತಿ ವರದಿಯ ಹಾಗೇ ತೆಲುಗು ಚಿತ್ರರಂಗದಲ್ಲೂ ಇದೇ ರೀತಿಯ ವರದಿಯನ್ನು ಪ್ರಕಟಿಸಬೇಕೆಂದು ಒತ್ತಾಯಿಸಿದ್ದಾರೆ.

ತ್ರಿಸದಸ್ಯ ನ್ಯಾಯಮೂರ್ತಿ ಹೇಮಾ ಸಮಿತಿಯನ್ನು 2017 ರಲ್ಲಿ ರಾಜ್ಯ ಸರ್ಕಾರ ಸ್ಥಾಪಿಸಿತು ಮತ್ತು 2019 ರಲ್ಲಿ ತನ್ನ ವರದಿಯನ್ನು ಸಲ್ಲಿಸಿತು. ಅದರ ಬಿಡುಗಡೆಗೆ ಕಾನೂನು ಸವಾಲುಗಳ ಕಾರಣ ವರದಿಯನ್ನು ಇದುವರೆಗೆ ಸಾರ್ವಜನಿಕಗೊಳಿಸಲಾಗಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಪತಿ ದರ್ಶನ್ ಬಳ್ಳಾರಿಗೆ ಹೋದರೂ ಕೈಬಿಡದ ಪತ್ನಿ ವಿಜಯಲಕ್ಷ್ಮಿ