Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅಪ್ಪು ಜೊತೆ ಇದ್ದೇನೆ ಎಂದು ಸಲ್ಮಾನ್ ಖಾನ್ ಹೊಟ್ಟೆ ಉರಿಸಿದ್ದ ಕನ್ನಡ ನಿರೂಪಕಿ ಅಪರ್ಣಾ ಕೊನೆ ಆಸೆ ಏನಾಗಿತ್ತು!

Aparna

Krishnaveni K

ಬೆಂಗಳೂರು , ಶುಕ್ರವಾರ, 12 ಜುಲೈ 2024 (10:26 IST)
Photo Credit: Facebook
ಬೆಂಗಳೂರು: ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ತಮ್ಮ 57 ನೇ ವಯಸ್ಸಿಗೆ ಇಹಲೋಕದ ಯಾತ್ರೆ ಮುಗಿಸಿದ್ದಾರೆ. ಅಚ್ಚ ಕನ್ನಡತಿ, ಸ್ಪಷ್ಟ ಕನ್ನಡದ ನಿರೂಪಣೆಯಿಂದ ಗಮನ ಸೆಳೆದಿದ್ದ ಅಪರ್ಣಾ ಕಿರುತೆರೆಯ ಮಜಾ ಟಾಕೀಸ್ ಮೂಲಕ ಜನರಿಗೆ ಹೆಚ್ಚು ಹತ್ತಿರವಾಗಿದ್ದರು.

ಕಿರುತೆರೆಯಲ್ಲಿ ಧಾರವಾಹಿಗಳು, ಬಿಗ್ ಬಾಸ್ ಶೋ ಮತ್ತು ಮಜಾ ಟಾಕೀಸ್ ಶೋ ಮೂಲಕ ಅಪರ್ಣಾ ಜನರಿಗೆ ಹೆಚ್ಚು ಚಿರಪರಿಚಿತರಾಗಿದ್ದರು. ಸರ್ಕಾರೀ ಕಾರ್ಯಕ್ರಮಗಳ ನಿರೂಪಣೆಯಲ್ಲಿ ಅವರ ಅಚ್ಚ ಕನ್ನಡದ ಭಾಷೆ ಎಲ್ಲರ ಗಮನ ಸೆಳೆಯುತ್ತಿತ್ತು. ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವಾಗ ಕೇಳುವ ಧ್ವನಿಯೂ ಅವರದ್ದೇ. ಧ್ವನಿಯಿಂದಲೇ ಅವರನ್ನು ಜನ ಗುರುತಿಸುತ್ತಿದ್ದರು.

ಅಪರ್ಣಾ ಕಿರುತೆರೆಯಲ್ಲಿ ಹೆಚ್ಚು ಜನಪ್ರಿಯತೆ ಪಡೆದಿದ್ದು ಮತ್ತು ಅವರ ಇನ್ನೊಂದು ಮುಖ ಜನರಿಗೆ ಪರಿಚಯವಾಗಿದ್ದು ಸೃಜನ್ ಲೋಕೇಶ್ ನಡೆಸಿಕೊಡುತ್ತಿದ್ದ ಮಜಾ ಟಾಕೀಸ್ ಮೂಲಕ. ಈ ಕಾಮಿಡಿ ಎಂಟರ್ ಟೈನರ್ ಶೋ ಮೂಲಕ ಅಪರ್ಣಾ ಕಾಮಿಡಿ ಮಾಡಲೂ ತಾವು ಸೈ ಎಂದು ಸಾಬೀತುಪಡಿಸಿದ್ದರು.

ವರೂ ಎಂಬ ಪಾತ್ರದ ಮೂಲಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದರು. ಅದರಲ್ಲೂ ಪುನೀತ್ ರಾಜ್ ಕುಮಾರ್ ಅತಿಥಿಯಾಗಿ ಪಾಲ್ಗೊಂಡಿದ್ದ ಶೋನಲ್ಲಿ ಸಲ್ಮಾನ್ ಖಾನ್ ಗೆ ಫೋನ್ ಮಾಡಿ ಹಲೋ ನಾನು ಅಪ್ಪ ಜೊತೆಗಿದ್ದೇನೆ, ನನ್ನ ಅಪ್ಪು-ನಡುವೆ ಅಂತದ್ದು ಏನೂ ಇಲ್ಲ ಎಂದು ಬಿಲ್ಡಪ್ ಕೊಟ್ಟಿದ್ದು, ಇತ್ತ ಫೋನ್ ಕಟ್ ಮಾಡಿ ಪುನೀತ್ ಗೆ, ಸಲ್ಲುಗೆ ನನ್ನನ್ನು ಕಂಡರೆ ತುಂಬಾ ಇಷ್ಟ, ನಿಮ್ಮ ಜೊತೆ ಇದ್ದೇನೆ ಎಂದಿದ್ದಕ್ಕೆ ಏನೋ ಒಂಥರಾ ಹೊಟ್ಟೆ ಉರಿ ಮುಂಡೇದಕ್ಕೆ ಎಂದು ಹೇಳುವ ಡೈಲಾಗ್ ಪ್ರೇಕ್ಷಕರು ಯಾವತ್ತೂ ಮರೆಯಲಾಗಲ್ಲ. ಈ ಎಪಿಸೋಡ್ ನಲ್ಲಿ ಪುನೀತ್ ಕೂಡಾ ಇಡೀ ಶೋ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದರು.

ಸಿನಿಮಾ, ಕಿರುತೆರೆ ಎಂದು ತಮ್ಮದೇ ಲೋಕದಲ್ಲಿದ್ದ ಅಪರ್ಣಾಗೆ 2022 ರಲ್ಲಿ ಶ್ವಾಸಕೋಶದ ಕ್ಯಾನ್ಸರ್ ತಗುಲಿತ್ತು. ಅದಾದ ಬಳಿಕ ಕಳೆದ ಎರಡು ವರ್ಷಗಳಿಂದ ಅವರು ಈ ಮಾರಕ ಖಾಯಿಲೆ ವಿರುದ್ಧ ಹೋರಾಡುತ್ತಲೇ ಬಂದಿದ್ದರು. ಕೊನೆಗೂ ಅದು ಕೊನೆಯ ಹಂತ ತಲುಪಿ ಅವರನ್ನೇ ಬಲಿ ತೆಗೆದುಕೊಂಡಿತು. ಇದುವರೆಗೆ ತಮ್ಮ ಖಾಯಿಲೆ ಬಗ್ಗೆ ಎಲ್ಲೂ ಹೇಳಿಕೊಳ್ಳದ ಅಪರ್ಣಾ ತಮ್ಮ ಸಾವಿನ ನಂತರ ಮಾಧ್ಯಮಗಳ ಮುಂದೆ ಎಲ್ಲವನ್ನೂ ಹೇಳಬೇಕು ಎಂದು ಪತಿ ನಾಗರಾಜ ವಸ್ತಾರೆಗೆ ಹೇಳಿದ್ದರಂತೆ. ಅದರಂತೆ ಪತ್ನಿಯ ಸಾವಿನ ಬಳಿಕ ಅವರಿಗಿದ್ದ ಖಾಯಿಲೆ ಬಗ್ಗೆ ವಿವರವಾಗಿ ಪತಿ ಹೇಳಿ ಭಾವುಕರಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಿವರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸಾಲು ಸಾಲು ಸಿನಿಮಾ ಅಪ್ ಡೇಟ್