ಹಲವು ದಿನಗಳಿಂದ ಎದ್ದಿದ್ದ ಕುತೂಹಲಕ್ಕೆ ಸೂಪರ್ ಸ್ಟಾರ್ ಕಮಲ್ ಹಾಸನ್ ತೆರೆ ಎಳೆದಿದ್ದಾರೆ. ತಮ್ಮ ಬದಲಾವಣೆಯ ಸಿದ್ಧಾಂತಗಳಿಗೆ ಯಾವ ಪಕ್ಷದಿಂದಲೂ ವೇದಿಕೆ ದೊರೆಯದ ಕಾರಣ ಹೊಸ ಪಕ್ಷ ಸ್ಥಾಪಿಸುತ್ತಿರುವುದಾಗಿ ಕಮಲ್ ಹಾಸನ್ ಘೋಷಿಸಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೊಸ ಪಕ್ಷ ಆರಂಭಿಸುವ ಬಗ್ಗೆ ಚಿಂತಿಸುತ್ತಿರುವುದಾಗಿ ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಮಲ್ ಹಾಸನ್ ಹೌದು ಪಕ್ಷ ಮಾಡುತ್ತಿದ್ದೇನೆ. ಸದ್ಯ, ಇರುವ ಯಾವುದೇ ಪಕ್ಷ ನನ್ನ ಸಿದ್ಧಾಂತಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ನಂಬಿಕೆ ಇಲ್ಲದಿರುವುದರಿಂದ ಈ ನಿರ್ಧಾರ ಕೈಗೊಳ್ಳುತ್ತಿದ್ದೇನೆ ಎಂದಿದ್ದಾರೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನೂ ಭೇಟಿ ಮಾಡಿ ಮಾತುಕತೆ ನಡೆಸಿದ್ದೆ. ಕಮ್ಯುನಿಸ್ಟ್ ಪಕ್ಷದ ಬಗ್ಗೆ ನಾನು ಕೊಂಚ ಒಲವು ಹೊಂದಿದ್ದೆ. ಆದರೆ, ನನ್ನ ಗುರಿಗಳು ಮತ್ತು ಸಿದ್ಧಾಂತಗಳು ಯಾವುದೇ ಪಕ್ಷಕ್ಕೆ ಹೊಂದಿಕೆ ಆಗುವುದಿಲ್ಲ ಎಂದಿದ್ದಾರೆ. ಅಣ್ಣಾಡಿಎಂಕೆ ಪಕ್ಷದಿಂದ ಶಶಿಕಲಾ ಉಚ್ಚಾಟನೆ ಒಳ್ಳೆಯ ನಿರ್ಧಾರ ಎಂದ ಕಮಲ್ ಹಾಸನ್, ಈ ಹಿಂದೆಯೂ ಈ ಬಗ್ಗೆ ನಾನು ಪ್ರಸ್ತಾಪಿಸಿದ್ದೆ. ಇದೀಗ, ತಮಿಳುನಾಡಿನಲ್ಲಿ ಬದಲಾವಣೆ ತರಬಹುದೆಂಬ ನಂಬಿಕೆ ಬಂದಿದೆ. ಎಷ್ಟು ವಿಳಂಬವಾಗುತ್ತೆ ಎಂಬ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ