ನಾನು ರಾಜಕೀಯಕ್ಕೆ ಬರುತ್ತೇನೆಂದು ಹರಡಿರುವ ಸುದ್ಧಿ ಶುದ್ಧ ಸುಳ್ಳು ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ರಾಜಕೀಯದಲ್ಲಿ ಸಿಕ್ಕ ಸಿಕ್ಕವರಿಗೆ ಸಲಾಂ ಹೊಡೆಯಬೇಕು. ಸಲಾಂ ಹೊಡೆಯುವ ಸಂಸ್ಕೃತಿ ನನ್ನದಲ್ಲ. ಹೀಗಾಗಿ, ಸಲಾಂ ಸಂಸ್ಕೃತಿ ಇರುವ ರಾಜಕೀಯ ನನಗೆ ಸರಿ ಹೊಂದುವುದಿಲ್ಲ. ಈ ಬಗ್ಗೆ ಹರಡಿರುವ ಸುದ್ದಿಗಳೆಲ್ಲ ಸುಳ್ಳು ಎಂದು ದರ್ಶನ್ ಸ್ಪಷ್ಟಪಡಿಸಿದ್ದಾರೆ. ಗುಪ್ತವಾಗಿ ರಾಜಕೀಯಕ್ಕೆ ಸೇರಬೇಕಾದ ಅನಿವಾರ್ಯತೆಯೂ ನನಗೆ ಇಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಇತ್ತೀಚೆಗೆ ರಿಯಲ್ ಸ್ಟಾರ್ ಉಪೇಂದ್ರ ವಿಶಿಷ್ಟವಾಗಿ ತಮ್ಮದೇ ಶೈಲಿ ಪ್ರಜಾಕಾರಣಕ್ಕೆ ಎಂಟ್ರಿ ಕೊಟ್ಟಿದ್ದರು. ಪ್ರಜಾಕಾರಣದ ಸಭೆಗಳನ್ನ ಸಹ ಉಪೇಂದ್ರ ನಡೆಸುತ್ತಿದ್ದಾರೆ. ಇದರ ಜೊತೆಗೆ ಕಿಚ್ಚ ಸುದೀಪ್ ಹೆಸರು ಕೂಡ ರಾಜಕೀಯದ ವಿಷಯವಾಗಿ ಬಂದು ಹೋಗಿತ್ತು. ಅದೇ ರೀತಿ ದರ್ಶನ್ ಕೂಡ ರಾಜಕೀಯಕ್ಕೆ ಬರುತ್ತಾರೆ. ರಾಷ್ಟ್ರೀಯ ಪಕ್ಷವೊಂದರ ಮೂಲಕ ಮೈಸೂರಿನಿಂದ ಸ್ಪರ್ಧಿಸುತ್ತಾರೆ ಎಂಬ ವದಂತೆ ಹಬ್ಬಿತ್ತು. ಈ ಹಿಂದೆ ಅಂಬರೀಷ್ ಅವರ ಪರ ಪ್ರಚಾರ ಬಂದಿದ್ದ ಸಂದರ್ಭದಲ್ಲೂ ದರ್ಶನ್ ರಾಜಕೀಯ ಪ್ರವೇಶದ ಊಹಾಪೋಹಗಳು ಹಬ್ಬಿದ್ದವು. ಇದೀಗ, ಸ್ವತಃ ದರ್ಶನ್ ಅವರೇ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ