Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಚೆನ್ನೈ: ಕಮಲ್ ಹಾಸನ್ ನಾಯಕರಾಗಿರುವ ವಿಕ್ರಂ ಸಿನಿಮಾ ವೀಕ್ಷಿಸಿರುವ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ.
ಜೂನ್ 3 ರಂದು ವಿಶ್ವದಾದ್ಯಂತ ವಿಕ್ರಮ್ ತೆರೆ ಕಾಣುತ್ತಿದೆ. ಆದರೆ ಈ ಸಿನಿಮಾದಲ್ಲಿ ಅತಿಯಾಗಿ ಹಿಂಸೆ ವೈಭವೀಕರಿಸಲಾಗಿದೆ ಎಂಬ ಆಕ್ಷೇಪ ಮಾಡಿದ್ದ ಸೆನ್ಸಾರ್ ಮಂಡಳಿ ಒಟ್ಟಾರೆ 13 ದೃಶ್ಯಗಳಿಗೆ ಕತ್ತರಿ ಹಾಕಲು ಸೂಚಿಸಿತ್ತು.
ಅದರಂತೆ ಅಂತಹ ದೃಶ್ಯಗಳನ್ನು ತೆಗೆದು ಹಾಕಲಾಗಿದ್ದು, ಇದೀಗ ಚಿತ್ರ ರಿಲೀಸ್ ಗೆ ರೆಡಿಯಾಗಿದೆ. ಕಮಲ್ ಹಾಸನ್ ಜೊತೆಗೆ ಫಹಾದ್ ಫಾಸಿಲ್, ವಿಜಯ್ ಸೇತುಪತಿ ಮುಂತಾದ ಘಟಾನುಘಟಿಗಳು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.