Publish Date: Wed, 29 Mar 2023 (09:40 IST)
Updated Date: Wed, 29 Mar 2023 (09:46 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿರುವ ಬಹುಬಾಷಾ ಸಿನಿಮಾ ಕಬ್ಜ ಒಟಿಟಿ ರಿಲೀಸ್ ದಿನಾಂಕ ಘೋಷಣೆಯಾಗಿದೆ.
ಕಬ್ಜ ಸಿನಿಮಾ ಏಳು ಭಾಷೆಗಳಲ್ಲಿ ಬಿಡುಗಡೆಯಾಗಿ ನೂರು ಕೋಟಿಗೂ ಅಧಿಕ ಗಳಿಕೆ ಮಾಡಿತ್ತು. ಇದೀಗ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ.
ಅಮೆಝೋನ್ ಪ್ರೈಮ್ ಕಬ್ಜ ಒಟಿಟಿ ಹಕ್ಕು ಖರೀದಿ ಮಾಡಿತ್ತು. ಇದೀಗ ಏಪ್ರಿಲ್ 14 ಕ್ಕೆ ಕಬ್ಜ ಪ್ರೈಮ್ ವಿಡಿಯೋದಲ್ಲಿ ಪ್ರಸಾರವಾಗಲಿದೆ ಎಂದು ತಿಳಿದುಬಂದಿದೆ. ಹಿಟ್ ಸಿನಿಮಾಗಳು ಬಿಡುಗಡೆಯಾಗಿ 40 ದಿನಗಳ ಬಳಿಕವೇ ಒಟಿಟಿಯಲ್ಲಿ ಬಿಡುಗಡೆಯಾಗುತ್ತದೆ. ಆದರೆ ಕಬ್ಜ ಬೇಗನೇ ಬಿಡುಗಡೆಯಾಗುತ್ತಿದೆ.