Publish Date: Wed, 11 May 2022 (10:14 IST)
Updated Date: Wed, 11 May 2022 (10:21 IST)
ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ರನ್ನೇ ಅನುಕರಿಸುತ್ತಿದ್ದ ಜ್ಯೂ. ರವಿಚಂದ್ರನ್ ಎಂದೇ ಕರೆಯಿಸಿಕೊಳ್ಳುತ್ತಿದ್ದ ಲಕ್ಷ್ಮೀ ನಾರಾಯಣ್ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟಿದ್ದಾರೆ.
ಕುಣಿಗಲ್ ತಾಲೂಕಿನವರಾದ ಲಕ್ಷ್ಮೀ ನಾರಾಯಣ್ ಸಂಪ್ ಗೆ ನೀರು ತುಂಬಿಸಲು ಮೋಟಾರು ಚಾಲನೆ ಮಾಡಲು ಹೋದಾಗ ವಿದ್ಯುತ್ ಪ್ರವಹಿಸಿ ದುರಂತ ಸಾವನ್ನಪ್ಪಿದ್ದಾರೆ.
ಅವರಿಗೆ 35 ವರ್ಷ ವಯಸ್ಸಾಗಿತ್ತು. ರವಿಂದ್ರನ್ ರನ್ನು ಅನುಕರಿಸುತ್ತಿದ್ದ ಲಕ್ಷ್ಮೀ ನಾರಾಯಣ್ ಹಲವು ಆರ್ಕ್ರೆಸ್ಟ್ರಾಗಳಲ್ಲಿ ಕೆಲಸ ಮಾಡಿದ್ದರು. ಇದೀಗ ಸಾವಿನ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.