Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಕನ್ನಡದಲ್ಲಿ ಅಶ್ವಿನಿ ನಕ್ಷತ್ರ ಧಾರವಾಹಿ ಮೂಲಕ ಸ್ಟಾರ್ ಪಟ್ಟ ಪಡೆದ ನಟ ಜೆಕೆ ಬಳಿಕ ಹಿಂದಿಯಲ್ಲಿ ಪೌರಾಣಿಕ ಧಾರವಾಹಿಯಲ್ಲಿ ರಾವಣನ ಪಾತ್ರ ಮಾಡಿ ಮಿಂಚಿದ್ದರು. ಇದೀಗ ಮತ್ತೆ ಹಿಂದಿ ಕಿರುತೆರೆಗೆ ಹಾರಿದ್ದಾರೆ.
ಸ್ಯಾಂಡಲ್ ವುಡ್ ನಲ್ಲಿ ಕೆಲವೊಂದು ಸಿನಿಮಾ ಮಾಡಿದರೂ ಜೆಕೆಗೆ ಹೇಳಿಕೊಳ‍್ಳುವ ಯಶಸ್ಸು ಸಿಕ್ಕಿರಲಿಲ್ಲ. ಈ ನಡುವೆ ಹಿಂದಿಯಲ್ಲೂ ಒಂದು ಸಿನಿಮಾ ಮಾಡಿದರು. ಅದಕ್ಕೂ ಸೋಲಾಯಿತು. ಬಳಿಕ ಮಾಡೆಲ್ ಲೋಕದಲ್ಲಿ ಬ್ಯುಸಿಯಾಗಿದ್ದ ಜೆಕೆ ಈಗ ಮತ್ತೆ ಕಿರುತೆರೆಯತ್ತ ಮುಖ ಮಾಡಿದ್ದಾರೆ.
ಹಿಂದಿಯ ಜನಪ್ರಿಯ ವಾಹಿನಿಯೊಂದರಲ್ಲಿ ಆರಂಭವಾಗಲಿರುವ ಹೊಸ ಧಾರವಾಹಿಯಲ್ಲಿ ಜೆಕೆ ಖಳನಾಯಕನಾಗಿ ಮಿಂಚಲಿದ್ದಾರಂತೆ. ಈ ಪಾತ್ರದಲ್ಲಿ ಅವರನ್ನು ಹಿಂದೆಂದೂ ನೋಡಿರದ ಲುಕ್ ನಲ್ಲಿ ನೋಡಬಹುದು ಎನ್ನಲಾಗಿದೆ.