Publish Date: Wed, 28 Nov 2018 (07:25 IST)
Updated Date: Wed, 28 Nov 2018 (07:27 IST)
ಬೆಂಗಳೂರು : ದಿವಂಗತ ಹಿರಿಯ ನಟ ರೆಬಲ್ ಸ್ಟಾರ್ ಅಂಬರೀಶ್ ಅಂತ್ಯಕ್ರಿಯೆಯ ಸಮಯದಲ್ಲಿ ನಟಿ ಜಯಪ್ರದಾ ಅವರು ಖಡಕ್ ಅಧಿಕಾರಿ ಡಿಸಿಪಿ ಅಣ್ಣಾಮಲೈ ವಿರುದ್ಧ ಕಿಡಿಕಾರಿದ್ದಾರೆ.
ಸೋಮವಾರ ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಅವರ ಅಂತಿಮ ದರ್ಶನಕ್ಕೆ ಲಕ್ಷಾಂತರ ಅಭಿಮಾನಿಗಳು ನೆರೆದಿದ್ದು, ನೂಕುನುಗ್ಗಲು ಕೂಡ ಇತ್ತು. ಆದ್ದರಿಂದ ಪೊಲೀಸರು ಬಿಗಿ ಭದ್ರತೆಯನ್ನು ಒದಗಿಸಿದ್ದರು. ಆಗ ಅಂಬಿ ಅವರ ಅಂತಿಮ ದರ್ಶನಕ್ಕೆ ಬಂದ ನಟಿ ಮಾಜಿ ಸಂಸದೆ ಜಯಪ್ರದಾ ಅವರು ಗೇಟ್ ಬಳಿ ನಿಂತಿದ್ದರಿಂದ ಡಿಸಿಪಿ ಅಣ್ಣಾಮಲೈ ಕಾರಿನಲ್ಲಿ ಕುಳಿತುಕೊಳ್ಳುವಂತೆ ಜಯಪ್ರದಾ ಅವರಿಗೆ ಸೂಚಿಸಿದ್ದಾರೆ.
ಇದರಿಂದ ಕೋಪಗೊಂಡ ನಟಿ ಜಯಪ್ರದಾ ಅವರು ,‘ಅಣ್ಣಾಮಲೈ ಡಿಸಿಪಿ ಆದರೆ ನಾನು ಮಾಜಿ ಸಂಸದೆಯಾಗಿದ್ದಾನೆ. ಅದರಲ್ಲೂ ನಾನೊಬ್ಬ ಮಹಿಳೆ. ನಮಗೆ ಭದ್ರತೆ ಒದಗಿಸಬೇಕು ಅವರು. ಯಾವುದೇ ತೊಂದರೆಯಾಗದಂತೆ ಭದ್ರತೆ ನೀಡುವುದು ಪೊಲೀಸರ ಕರ್ತವ್ಯವಾಗಿದೆ’ ಎಂದು ಹೇಳುವ ಮೂಲಕ ಅಣ್ಣಾಮಲೈ ವಿರುದ್ಧ ಕಿಡಿಕಾರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.