Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಾಯಕರಾಗಿ ನಟಿಸಿದ್ದ ಕೊನೆಯ ಸಿನಿಮಾ ಜೇಮ್ಸ್ ಟೀಸರ್ ಇಂದು ಲಾಂಚ್ ಆಗಲಿದೆ.
ಜೇಮ್ಸ್ ಸಿನಿಮಾ ಬಗ್ಗೆ ಅಪ್ಪು ಅಭಿಮಾನಿಗಳಲ್ಲಿ ಅಪಾರ ನಿರೀಕ್ಷೆಯಿದೆ. ಈಗಾಗಲೇ ಯೋಧನ ಅವತಾರದಲ್ಲಿ ಪುನೀತ್ ಪೋಸ್ಟರ್ ಬಿಡುಗಡೆಯಾಗಿತ್ತು. ಇದು ಚಿತ್ರದ ಮೇಲಿನ ಕುತೂಹಲ ಮತ್ತಷ್ಟು ಹೆಚ್ಚಿಸಿದೆ.
ಇಂದು ಬೆಳಿಗ್ಗೆ 11.11 ಕ್ಕೆ ಜೇಮ್ಸ್ ಟೀಸರ್ ಲಾಂಚ್ ಆಗಲಿದೆ. ಇದಕ್ಕೆ ಈಗಾಗಲೇ ಪುನೀತ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆರಂಭಿಸಿದ್ದಾರೆ. ಇದರಿಂದಾಗಿ ಟೀಸರ್ ಬಗ್ಗೆ ಕ್ರೇಜ್ ಕೂಡಾ ಹೆಚ್ಚಾಗಿದೆ.