ಚೆನ್ನೈ: ಜೈ ಭೀಮ್ ಸಿನಿಮಾದಲ್ಲಿ ವೆಣ್ಣಿಯಾರ್ ಸಮುದಾಯಕ್ಕೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ನಟ ಸೂರ್ಯ, ಪತ್ನಿ ಜ್ಯೋತಿಕಾ ಮತ್ತು ಚಿತ್ರತಂಡ ಹಾಗೂ ಅಮೆಝೋನ್ ಪ್ರೈಮ್ ವಿರುದ್ಧ ಲೀಗಲ್ ನೋಟಿಸ್ ಜಾರಿ ಮಾಡಲಾಗಿದೆ.
ವೆಣ್ಣಿಯಾರ್ ಸಂಘದ ಪರ ವಕೀಲರು ಸೂರ್ಯ ಮತ್ತು ಚಿತ್ರತಂಡದ ವಿರುದ್ಧ 5 ಕೋಟಿ ರೂ. ದಾವೆ ಹೂಡಿದ್ದಾರೆ. ಅಲ್ಲದೆ ತಮ್ಮ ಸಮುದಾಯವನ್ನು ಅವಮಾನಿಸಿದ್ದಕ್ಕೆ ಬೇಷರತ್ ಕ್ಷಮೆ ಯಾಚಿಸಬೇಕೆಂದು ಕೋರಿದ್ದಾರೆ.
ಜೈ ಭೀಮ್ ಸಿನಿಮಾದಲ್ಲಿ ಕೆಳ ಜಾತಿಯ ಬಡ ಕಾರ್ಮಿಕನೊಬ್ಬ ಲಾಕಪ್ ಡೆತ್ ಆಗುವ ಕತೆಯಿದ್ದು, ಆತನ ಪ್ರಕರಣವನ್ನು ಮುಚ್ಚಿಹಾಕಲು ಪ್ರಭಾವಿ ವರ್ಗ ಹೇಗೆ ಸಂಚು ರೂಪಿಸುತ್ತದೆ ಎಂದು ಹೇಳಲಾಗಿದೆ.