ಬೆಂಗಳೂರು: ಸಂಗೀತ ನಿರ್ದೇಶಕ ಹಂಸಲೇಖ ದಲಿತರ ಮನೆಗೆ ಬಲಿತರು ಹೋಗುವ ವಿಚಾರಕ್ಕೆ ಸಂಬಂಧಿಸಿದಂತೆ ನೀಡಿದ ಹೇಳಿಕೆಯೊಂದು ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಹಂಸಲೇಖ ಪೇಜಾವರ ಶ್ರೀಗಳು ದಲಿತರ ಮನೆಗೆ ಹೋಗಿ ವಾಸ್ತವ್ಯ ಹೂಡಿದ್ದಾರೆ ಎಂದು ಇತ್ತೀಚೆಗೆ ಸುದ್ದಿ ನೋಡಿದೆ. ದಲಿತರ ಮನೆಗೆ ಅವರು ಹೋಗಬಹುದು. ಆದರೆ ಪೇಜಾವರ ಶ್ರೀಗಳು ದಲಿತರ ಮನೆಗೆ ಹೋದಾಗ ಅವರು ಕೋಳಿ ಕೊಟ್ರೆ ತಿನ್ತಾರಾ? ಅಥವಾ ಕುರಿ ರಕ್ತ ಫ್ರೈ ಮಾಡಿ ಕೊಟ್ಟರೆ ತಿನ್ತಾರಾ? ಅಲ್ಲಾ ಲಿವರ್ ಫ್ರೈ ಮಾಡಿದ್ರೆ ತಿನ್ತಾರಾ?
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಅವರು ಬಡವರ ಮನೆಗೆ ಹೋಗಿ ವಾಸ್ತವ್ಯ ಹೂಡುವುದನ್ನು ಶುರು ಮಾಡಿದ್ದರು. ಅವರ ಹಿಂದೇ ಇತ್ತೀಚೆಗಿನ ಮಂತ್ರಿಗಳೂ ಗ್ರಾಮ ವಾಸ್ತವ್ಯ ಅಂತ ಮಾಡ್ತಾರೆ? ನನಗೆ ದಲಿತರ ಮನೆಗೆ ಬಲಿತರು ಹೋಗುವುದು ಯಾವ ದೊಡ್ಡ ವಿಷಯ ಎಂದು ಅರ್ಥವಾಗುತ್ತಿಲ್ಲ? ಎಂದು ವ್ಯಂಗ್ಯ ಮಾಡಿದ್ದಾರೆ.
ಆದರೆ ಹಂಸಲೇಖ ಹೇಳಿಕೆ ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ. ಶ್ರೀಗಳ ಬಗ್ಗೆ ಇಂತಹಾ ಹೇಳಿಕೆ ಕೊಟ್ಟಿದ್ದು ಅವರ ಭಕ್ತರಿಗೆ ನೋವುಂಟು ಮಾಡಿದೆ. ದಲಿತರು ಯಾಕೆ ಪೇಜಾವರ ಶ್ರೀಗಳಿಗೆ ಕೋಳಿ ಕೊಡಬೇಕು? ಇಂಥಾ ಹೇಳಿಕೆ ಯಾಕೆ ಕೊಡ್ತೀರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಕೆಲವರು ಕಿಡಿ ಕಾರಿದ್ದಾರೆ.