ಬೆಂಗಳೂರು: ನವರಸನಾಯಕ ಜಗ್ಗೇಶ್ ಗೆ ಹಲವು ದಿನಗಳ ಬಳಿಕ ಬ್ರೇಕ್ ಕೊಟ್ಟ ಸಿನಿಮಾ ಪ್ರೀಮಿಯರ್ ಪದ್ಮಿನಿ. ಈ ಸಿನಿಮಾ ಈಗ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ.
ಜಗ್ಗೇಶ್ ಹೊಸ ಶೇಡ್ ನಲ್ಲಿ ಕಾಣಿಸಿಕೊಂಡಿದ್ದ ಪ್ರೀಮಿಯರ್ ಪದ್ಮಿನಿ ಸಿನಿಮಾ ಇಂದು ಸಂಜೆ ಜೀ ಕನ್ನಡದಲ್ಲಿ 5 ಗಂಟೆಗೆ ಇದೇ ಮೊದಲ ಬಾರಿಗೆ ಪ್ರಸಾರವಾಗುತ್ತಿದೆ.
ಕಿರುತೆರೆಯಲ್ಲಿ ಅನೇಕ ಧಾರವಾಹಿಗಳನ್ನು ನಿರ್ಮಿಸಿದ ಶ್ರುತಿ ನಾಯ್ಡು ಮತ್ತು ರಮೇಶ್ ಇಂದಿರಾ ಈ ಸಿನಿಮಾ ಮೂಲಕ ಬೆಳ್ಳಿತೆರೆಯಲ್ಲಿ ನಿರ್ದೇಶಕರಾಗಿ ಸೈ ಎನಿಸಿಕೊಂಡಿದ್ದರು. ಈ ಪ್ರೀಮಿಯರ್ ಪದ್ಮಿನಿಗೆ ಇಂದು ಪ್ರೀಮಿಯರ್ ಶೋ ಭಾಗ್ಯ ಸಿಕ್ಕಿದೆ.