Publish Date: Wed, 04 Apr 2018 (12:21 IST)
Updated Date: Wed, 04 Apr 2018 (12:23 IST)
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಹಾಲಿ ಸೂಪರ್ ಸ್ಟಾರ್ ಗಳೆಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್. ಒಂದು ಕಾಲದಲ್ಲಿ ಕುಚುಕು ಗೆಳೆಯರಂತಿದ್ದ ಇವರಿಬ್ಬರೂ ಈಗ ಮುನಿಸಿಕೊಂಡಿದ್ದಾರೆ.
ದರ್ಶನ್ ಟ್ವಿಟರ್ ನಲ್ಲಿ ಸುದೀಪ್ ನನ್ನ ಸ್ನೇಹಿತನಲ್ಲ ಎಂದು ಸಾರುವವರೆಗೆ ಇವರ ಸಂಬಂಧ ತಲುಪಿದೆ. ಈ ಬಗ್ಗೆ ಅಭಿಮಾನಿಯೊಬ್ಬರು ಬೇಸರಿಂದಲೇ ನಟ ಜಗ್ಗೇಶ್ ಬಳಿ ಟ್ವೀಟ್ ಮಾಡಿಕೊಂಡಿದ್ದಕ್ಕೆ ಜಗ್ಗೇಶ್ ಪ್ರತಿಕ್ರಿಯಿಸಿದ್ದಾರೆ.
ಯಾವುದೋ ವಿಷ ಗಳಿಗೆಯಲ್ಲಿ ಇಬ್ಬರೂ ದೂರವಾದರು. ಆದರೆ ನಿಮ್ಮಂಥವರ ಹಾರೈಕೆಯಿಂದ ಖಂಡಿತಾ ಇಬ್ಬರೂ ಮುಂದೊಂದು ದಿನ ಒಂದಾಗಿಯೇ ಆಗುತ್ತಾರೆ. ತಾಳ್ಮೆಯಿಂದ ಕಾಯಿರಿ ಎಂದಿದ್ದಾರೆ. ಅವರಿಬ್ಬರ ಅಭಿಮಾನಿಗಳೂ ಅದನ್ನೇ ಬಯಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ