Webdunia - Bharat's app for daily news and videos

Install App

ನಿನ್ನ ಪ್ರತಿ ಹೆಜ್ಜೆಯಲ್ಲಿ ಜತೆಯಾಗಿರುತ್ತೇನೆ: ತಂಗಿ ನೆನೆದು ಪೋಸ್ಟ್ ಹಂಚಿದ ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ

Sampriya
ಸೋಮವಾರ, 19 ಆಗಸ್ಟ್ 2024 (19:57 IST)
Photo Courtesy X
ಕನ್ನಡದ 'ಕಿರಿಕ್ ಪಾರ್ಟಿ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕೊಡಗಿನ ಬೆಡಗಿ, ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರು ಸದ್ಯ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಈ ಮಧ್ಯೆ ತಮ್ಮ ಪುಟ್ಟ ತಂಗಿಯ ಭವಿಷ್ಯ ನೆನೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ರಕ್ಷಾ ಬಂಧನ ದಿನ ತಂಗಿಯ ಏಳಿಗೆಯಲ್ಲಿ ಜತೆಯಾಗಿರುತ್ತೇನೆ ಬರೆದುಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಹಂಚಿಕೊಂಡ ಪೋಸ್ಟ್‌ನಲ್ಲಿ ಹೀಗೇ ಬರೆದುಕೊಂಡಿದ್ದಾರೆ. ಪ್ರೀತಿಯ ಪುಟ್ಟ ತಂಗಿಯೇ, ನಾನು ನಿನ್ನನ್ನು ಪ್ರೀತಿಸುತ್ತೇನೆ.  ನೀವು ಸುಂದರ ಮಹಿಳೆಯಾಗಿ ಬೆಳೆಯುತ್ತೀರಿ ಎಂದು ನಾನು ಭಾವಿಸುತ್ತೇನೆ, ಎಲ್ಲರೂ ಗೌರವದಿಂದ ಕಾಣುವ ಮತ್ತು ಗೌರವಿಸುವ ಮಹಿಳೆಯಾಗುವ ಸಂದರ್ಭದಲ್ಲಿ ಹೆಚ್ಚು ಯುದ್ಧಗಳನ್ನು ನೀನು ಮಾಡಬೇಕಾಗಿಲ್ಲ ಎಂದು ಭಾವಿಸುತ್ತೇನೆ.

ನಾನು ನಿನಗೆ ಮಾತು ಕೊಡುತ್ತೇನೆ, ನಾನು ನಿನ್ನನ್ನು ರಕ್ಷಿಸುವಲ್ಲಿ ಪ್ರಯತ್ನಿಸುತ್ತೇನೆ. , ಆದರೆ ಈ ಸಂದರ್ಭದಲ್ಲಿ ನೀನೇ ಹಲವಾರ ವಿಚಾರಗಳನ್ನು ಎದುರಿಸಬೇಕಾಗುತ್ತದೆ, ಆ ಸಮಯದಲ್ಲಿ ವಿಶ್ವವೇ ಸುಲಭವಾಗಿ ಹೋಗುತ್ತಿರುತ್ತದೆ ಎಂದು ಭಾವಿಸುತ್ತೇನೆ.

ನೀವು ಈ ಜಗತ್ತಿನಲ್ಲಿ ಸುರಕ್ಷಿತವಾಗಿ ಮತ್ತು ಸಂತೋಷವಾಗಿರುವಿರಿ ಎಂದು ನಾನು ಭಾವಿಸುತ್ತೇನೆ. ನಿಮ್ಮಂತಹ ಎಲ್ಲಾ ಚಿಕ್ಕ ಹುಡುಗಿಯರಿಗೆ ಜಗತ್ತು ವಾಸಿಸಲು ಸಂತೋಷದ ಸುರಕ್ಷಿತ ಸ್ಥಳವಾಗಲಿದೆ ಎಂದು ನಾನು ಭಾವಿಸುತ್ತೇನೆ.   
ನಾನು ನಿನ್ನನ್ನು ಪ್ರೀತಿಸುತ್ತೇನೆ, ನನ್ನ ಪುಟ್ಟ ಗೊಂಬೆ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Vickey kaushal Birthday: ಪತಿ ಜತೆಗಿನ ಮುದ್ದು ಫೋಟೋ ಶೇರ್ ಮಾಡಿ ವಿಶ್ ಮಾಡಿದ ಕತ್ರಿನಾ

ನಿಜವಾದ ಹೀರೋಗಳ ಬಗ್ಗೆ ಬಾಲಿವುಡ್ ಸೆಲೆಬ್ರಿಟಿಗಳು ಮಾತಾಡ್ತಿಲ್ಲ: ಪವನ್ ಕಲ್ಯಾಣ್ ಅಸಮಾಧಾನ

ಪ್ರೀತಿಸಿ ಮದುವೆಯಾದ ಗಾಯಕಿ ಪೃಥ್ವಿ- ಅಭಿಷೇಕ್‌ ಜೋಡಿಯ ಅದ್ಧೂರಿ ಆರತಕ್ಷತೆಗೆ ಸೆಲೆಬ್ರೆಟಿಗಳ ಸಾಥ್‌

Sitare Zameen Par: ಸಿನಿಮಾ ಬಾಯ್ಕಾಟ್ ಭಯಕ್ಕೆ ಎಕ್ಸ್ ಪೇಜ್ ಗೆ ತ್ರಿವರ್ಣ ಧ್ವಜ ಹಾಕಿದ ಅಮೀರ್ ಖಾನ್ ಸಂಸ್ಥೆ

Archana Udupa: ಅರ್ಚನಾ ಉಡುಪಗೆ ಕ್ಯಾನ್ಸರ್ ನಿಜಾನಾ: ಗಾಯಕಿ ಹೇಳಿದ್ದೇನು

ಮುಂದಿನ ಸುದ್ದಿ
Show comments