Select Your Language

Notifications

webdunia
webdunia
webdunia
webdunia

ಕೊಡವ ಶೈಲಿಯಲ್ಲಿ ಹರ್ಷಿಕಾ-ಭುವನ್ ಅದ್ಧೂರಿ ವಿವಾಹ

ಕೊಡವ ಶೈಲಿಯಲ್ಲಿ ಹರ್ಷಿಕಾ-ಭುವನ್ ಅದ್ಧೂರಿ ವಿವಾಹ
ಮಡಿಕೇರಿ , ಗುರುವಾರ, 24 ಆಗಸ್ಟ್ 2023 (16:51 IST)
Photo Courtesy: Instagram
ಮಡಿಕೇರಿ: ಸ್ಯಾಂಡಲ್ ವುಡ್‍ ನಟ ಭುವನ್ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚ ಇಂದು ಕೊಡಗಿನಲ್ಲಿ ಸಾಂಪ್ರದಾಯಿಕವಾಗಿ ವಿವಾಹವಾಗಿದ್ದಾರೆ.

12 ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ಕೊಡಗಿನವರಾಗಿದ್ದರಿಂದ ಕೊಡಗಿನಲ್ಲಿ ಅಲ್ಲಿಯ ಸಂಪ್ರದಾಯದಂತೇ ವಿವಾಹವಾಗಿದ್ದಾರೆ.  ಕೊಡವ ಶೈಲಿಯಲ್ಲಿ ಪೇಟ, ಸೀರೆ, ಸಂಪ್ರದಾಯಗಳು ಅಲ್ಲಿಗೆ ಕಣ್ಣಿಗೆ ಹಬ್ಬದಂತಾಗಿತ್ತು.

ಮದುವೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ನಟ ದೊಡ್ಡಣ್ಣ, ಜೈಜಗದೀಶ್ ದಂಪತಿ, ಗೋಲ್ಡನ್ ಸ್ಟಾರ್ ಗಣೇಶ್ ಕುಟುಂಬ, ನಟಿ ಅನುಪ್ರಭಾಕರ್ ಕುಟುಂಬಸ್ಥರು ಸೇರಿದಂತೆ ಹರ್ಷಿಕಾ, ಭುವನ್ ಆಪ್ತರು, ಕುಟುಂಬಸ್ಥರು ಆಗಮಿಸಿ ಶುಭ ಹಾರೈಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಕಾಶ್ ರಾಜ್ ಅರೆಸ್ಟ್ ಮಾಡಿ! ಟ್ರೆಂಡ್ ಶುರು!