Publish Date: Tue, 18 Jun 2019 (09:22 IST)
Updated Date: Tue, 18 Jun 2019 (09:24 IST)
ಬೆಂಗಳೂರು: ಹರಿಪ್ರಿಯಾ ಈಗ ಸ್ಯಾಂಡಲ್ ವುಡ್ ನಲ್ಲಿ ಅತ್ಯಂತ ಬ್ಯುಸಿ ನಟಿ. ಹಲವು ಚಿತ್ರಗಳಿಗೆ ಹರಿಪ್ರಿಯಾ ನಾಯಕಿ. ಆದರೆ ಇದೀಗ ಬಿಡುವಿಲ್ಲದೇ ದುಡಿದು ಹರಿಪ್ರಿಯಾಗೂ ಸಾಕಾಗಿದೆಯಂತೆ. ಅದಕ್ಕೇ ಬ್ರೇಕ್ ತೆಗೆದುಕೊಂಡಿದ್ದಾರೆ.
ಹರಿಪ್ರಿಯಾ ಈಗಷ್ಟೇ ನಾಲ್ಕೈದು ಸಿನಿಮಾ ಮಾಡಿ ಮುಗಿಸಿದ್ದಾರೆ. ಅವುಗಳಲ್ಲಿ ಎಲ್ಲಿದ್ದೆ ಇಲ್ಲಿ ತನಕ, ಕನ್ನಡ್ ಗೊತ್ತಿಲ್ಲ, ಕಥಾಸಂಗಮ, ಬಿಚ್ಚುಗತ್ತಿ, ಕುರುಕ್ಷೇತ್ರ ಸೇರಿವೆ. ಈ ಎಲ್ಲಾ ಸಿನಿಮಾಗಳ ಚಿತ್ರೀಕರಣ, ಡಬ್ಬಿಂಗ್ ಮುಗಿಸಿಕೊಟ್ಟಿದ್ದಾರಂತೆ ಹರಿಪ್ರಿಯಾ.
ಹೀಗಾಗಿ ತಮ್ಮೆಲ್ಲಾ ಕಮಿಟ್ ಮೆಂಟ್ ಗಳನ್ನು ಮುಗಿಸಿ ಈಗ ಕೊಂಚ ದಿನ ಬಿಡುವು ತೆಗೆದುಕೊಳ್ಳಲು ಹರಿಪ್ರಿಯಾ ನಿರ್ಧರಿಸಿದ್ದಾರೆ. ಹಾಗಾಗಿ ಕೆಲವು ದಿನಗಳ ಮಟ್ಟಿಗೆ ಟ್ರಿಪ್ ಹೊರಟಿದ್ದಾರಂತೆ. ಆದರೆ ಎಲ್ಲಿಗೆ ಎಂದು ಹೇಳಿಲ್ಲ. ಟ್ರಿಪ್ ನಿಂದ ಬಳಿಕವಷ್ಟೇ ಹೊಸ ಸಿನಿಮಾದ ಸುದ್ದಿ ಕೊಡುತ್ತೇನೆ. ಸದ್ಯಕ್ಕೆ ನನ್ನ ಎಲ್ಲಾ ಸಿನಿಮಾ ಕೆಲಸ ಮುಗಿಸಿದ್ದೇನೆ. ಇನ್ನು ಕೆಲವು ದಿನಗಳ ನಂತರ ಸಿಗುತ್ತೇನೆ ಎಂದು ಅಭಿಮಾನಿಗಳಿಗೆ ಕೈ ಬೀಸಿರುವ ಹರಿಪ್ರಿಯಾ ರಜಾ ಮಜಾ ಮಾಡಲು ಹೊರಟಿದ್ದಾರೆ.