Publish Date: Wed, 03 Jul 2019 (09:09 IST)
Updated Date: Wed, 03 Jul 2019 (09:11 IST)
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಿಲ್ಲ. ಆದರೆ ಗೀತಾ ಟೀಸರ್ ನೋಡಿದ ಮೇಲೆ ಗಣೇಶ್ ಮತ್ತೊಂದು ಮುಖ ಬಯಲಾಗಿದೆ.
ಗಣೇಶ್ ಬರ್ತ್ ಡೇ ಪ್ರಯುಕ್ತ ನಿನ್ನೆ ಗೀತಾ ಟೀಸರ್ ಬಿಡುಗಡೆಯಾಗಿದ್ದು, ಅಭಿಮಾನಿಗಳಿಗೆ ಗೋಲ್ಡನ್ ಸ್ಟಾರ್ ಕಡೆಯಿಂದ ನಿಜಕ್ಕೂ ಗಿಫ್ಟ್ ಸಿಕ್ಕಿದೆ.
ಗೋಕಾಕ್ ಚಳವಳಿಯ ತುಣುಕುಗಳು, ಕನ್ನಡಕ್ಕಾಗಿ ಹೋರಾಡುವ ನಾಯಕನಾಗಿ ಗಣೇಶ್, ಕನ್ನಡಾಭಿಮಾನ ಪ್ರೇಕ್ಷಕರನ್ನು ಸೆಳೆಯಲು ಯಶಸ್ವಿಯಾಗಿದೆ. ಇದೀಗ ಗೀತಾ ಟೀಸರ್ ಯೂ ಟ್ಯೂಬ್ ನಲ್ಲಿ ನಂ.1 ಆಗಿ ಟ್ರೆಂಡ್ ಆಗಿದೆ.