ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಮಹಾರಾಷ್ಟ್ರ ಸರಕಾರ ತಿರುಗಿ ಬಿದ್ದಿದೆ.
ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಮುಂಬೈ ಪೊಲೀಸರ ವಿರುದ್ಧ ನೀಡಿರುವ ಹೇಳಿಕೆಯು ನಟಿಗೆ ಉರುಳಾಗುವ ಸಾಧ್ಯತೆಯಿದೆ.
ಮುಂಬೈ ಅಷ್ಟೇ ಅಲ್ಲ, ಮಹಾರಾಷ್ಟ್ರದಲ್ಲಿ ಇರುವುದಕ್ಕೆ ನಟಿ ಕಂಗನಾಗೆ ಹಕ್ಕು ಇಲ್ಲ ಎಂದು ಗೃಹ ಸಚಿವ ಅನಿಲ್ ದೇಶ್ಮುಖ್ ಖಡಕ್ ಆಗಿ ಹೇಳಿದ್ದಾರೆ.
ತಮಗೆ ಮಾಫಿಯಾದ ಗೂಂಡಾಗಳಿಗಿಂತ ಮುಂಬೈ ಪೊಲೀಸರ ಭಯವಿದೆ ಎಂದು ನಟಿ ಕಂಗನಾ ರಣಾವತ್ ಹೇಳಿಕೆ ನೀಡಿದ್ದರು.