Publish Date: Thursday, 21 July 2022 (11:00 IST)
Updated Date: Thursday, 21 July 2022 (09:02 IST)
ಬೆಂಗಳೂರು: ಸಾಯಿ ಪಲ್ಲವಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಬಹುಭಾಷಾ ಸಿನಿಮಾ ಗಾರ್ಗಿ ಈಗ ಥಿಯೇಟರ್ ನಲ್ಲಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.
ಸಿನಿಮಾ ನೋಡಿದವರೆಲ್ಲಾ ಗಾರ್ಗಿ ಸಿನಿಮಾವನ್ನು ಕೊಂಡಾಡುತ್ತಿದ್ದಾರೆ. ಮಧ‍್ಯಮ ವರ್ಗದ ಮಹಿಳೆಯ ಹೋರಾಟದ ಬದುಕನ್ನು ಪ್ರತಿನಿಧಿಸಿರುವ ಸಾಯಿ ಪಲ್ಲವಿ ನಟನಗೆ ಜನ ಫಿದಾ ಆಗಿದ್ದಾರೆ.
ಇದೀಗ ಸಿನಿಮಾ ಒಟಿಟಿ ರಿಲೀಸ್ ಬಗ್ಗೆ ಸುದ್ದಿ ಹಬ್ಬಿದೆ. ಸಿನಿಮಾ ಆಗಸ್ಟ್ ಎರಡನೇ ವಾರದಲ್ಲಿ ಒಟಿಟಿಯಲ್ಲಿ ರಿಲೀಸ್ ಆಗಲಿದೆಯಂತೆ. ಸೋನಿ ಲೈವ್ ಚಿತ್ರದ ಒಟಿಟಿ ಹಕ್ಕು ಖರೀದಿ ಮಾಡಿತ್ತು.