ಬೆಂಗಳೂರು: ಕಲರ್ಸ್ ಕನ್ನಡದ ಹಿಟ್ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವ ರಾಜಾರಾಣಿಯ ಮೂರನೇ ಸೀಸನ್ ಶುಭಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ ಗ್ರ್ಯಾಂಡ್ ಓಪನಿಂಗ್ ಶೂಟಿಂಗ್ ಮುಗಿಸಿದೆ. ಇನ್ನೂ ಈ ಶೋನಲ್ಲಿ ಹೊಸ ತೀರ್ಪುಗಾರರಾಗಿ ಅದಿತಿ ಪ್ರಭುದೇವ ಅವರು ಕಾಣಿಸಿಕೊಳ್ಳಲಿದ್ದಾರೆ. ಅದಲ್ಲದೆ ನಟ ಸೃಜನ್ ಲೊಕೇಶ್, ನಟ ತಾರಾ ಅನುರಾಧ ಅವರು ತೀರ್ಪುಗರರಾಗಿದ್ದಾರೆ.
ಜೂನ್ 8ರ ರಾತ್ರಿ 7.30ಕ್ಕೆ ಮೊದಲ ಸಂಚಿಕೆಯನ್ನು ಆರಂಭಿಸಲಿರುವ ರಾಜರಾಣಿ ರೀಲೋಡೆಡ್ ಅನ್ನು ಕಲರ್ಸ್ ಕನ್ನಡ ಚಾನೆಲ್ ಹಾಗೂ ಜಿಯೊ ಸಿನಿಮಾದಲ್ಲಿಯೂ ವೀಕ್ಷಿಸಬಹುದು.
ಈ ಶೋನಲ್ಲಿ ಒಟ್ಟು 12 ಜೋಡಿಗಳು ಮೋಡಿ ಮಾಡಲಿದ್ದಾರೆ. ವಿಶೇಷವಾಗಿ ಸ್ಟಾರ್ ಸೆಲೆಬ್ರಿಟಿಗಳು, ಸಾಮಾಜಿಕ ಜಾಲತಾಣದಲ್ಲಿ ಹವಾ ಸೃಷ್ಟಿಸಿದ ಜೋಡಿಗಳನ್ನು ಈ ಶೋನಲ್ಲಿ ನಿರೀಕ್ಷಿಸಬಹುದು.
ಲೊಕೇಶ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ರಾಜ ರಾಣಿ ಶೋ ನಿರ್ಮಾಣಗೊಳ್ಳುತ್ತಿದೆ. ವೈಟ್ ಗೋಲ್ಡ್ ಅರ್ಪಿಸುವ ಈ ಶೋನ ಸಹ ಪ್ರಾಯೋಜಕರು ಅಮೃತ್ ನೋನಿ. ಜತೆಗೆ ಸ್ಪೆಷಲ್ ಪಾರ್ಟ್ನರ್ ಆಗಿ ಸ್ವಸ್ತಿಕ್ ತುಪ್ಪ, ಭೀಮಾ ಜ್ಯೂಯೆಲ್ಲರ್ಸ್, ಸದ್ಗುರು ಆಯುರ್ವೇದ ಗ್ರಾಮ್ ಫ್ಲೋರ್ ಸೋಪು, ಸಂಗೀತ ಮೊಬೈಲ್ಸ್ ಈ ಜನಪ್ರಿಯ ಕಾರ್ಯಕ್ರಮದ ಜತೆ ಕೈ ಜೋಡಿಸಿವೆ.