Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರಿಲೀಸ್ ಆಯ್ತು ಫೋರ್ ವಾಲ್ಸ್ ಅಂಡ್ ನೈಟೀಸ್ ಪೋಸ್ಟರ್...!

ರಿಲೀಸ್ ಆಯ್ತು ಫೋರ್ ವಾಲ್ಸ್ ಅಂಡ್ ನೈಟೀಸ್ ಪೋಸ್ಟರ್...!
ಬೆಂಗಳೂರು , ಗುರುವಾರ, 2 ಜನವರಿ 2020 (14:29 IST)
ಗಾಂಧಿನಗರದಲ್ಲಿ ವಿಭಿನ್ನ ಟೈಟಲ್ ಕನ್ ಸೆಪ್ಟ್ ಸಿನಿಮಾಗಳು ಬರ್ತಾನೆ ಇವೆ. ಈ ಲಿಸ್ಟ್ ಗೆ ಮತ್ತೊಂದು ಚಿತ್ರ ಸೇರ್ಪಡೆಯಾಗಿದೆ. ಅದೇ ಫೋರ್ ವಾಲ್ಸ್ & ಟೂ ನೈಟೀಸ್ ಅನ್ನೋ ಚಿತ್ರ. ಟೈಟಲ್ ನಿಂದಲ್ಲೇ ನಿರೀಕ್ಷೆ ಹುಟ್ಟಿಸಿರೋ ಈ ಚಿತ್ರ ಹೊಸ ವರ್ಷಕ್ಕೆ ವಿಭಿನ್ನ ಪೋಸ್ಟರ್ ರಿಲೀಸ್ ಮಾಡಿದೆ. ಎಸ್ ಸಜ್ಜನ ಅಂತ್ಲೇ ಗುರ್ತಿಸಿಕೊಂಡಿರೋ ಸಂಗಮೇಶ ಎಸ್. ಸಜ್ಜನ ನಿರ್ದೇಶನದ ಎರಡನೇ ಸಿನಿಮಾವಿದು. ಮಂತ್ರಂ ಅನ್ನೋ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿ ಗೆದ್ದಿರೋ ಎಸ್ ಎಸ್ ಸಜ್ಜನ ಹೊಸ ಪ್ರಯತ್ನ  ಸಿನಿಮಾ ಫೋರ್ ವಾಲ್ಸ್ & ಟೂ ನೈಟೀಸ್.
ಕಳೆದ ಎರಡೂವರೆ ವರ್ಷಗಳಿಂದ ಮಾಧ್ಯಮ ಲೋಕದಲ್ಲಿ ಸೇವೆ ಸಲ್ಲಿಸುತಿದ್ದ ನಿರ್ದೇಶಕರು ಮತ್ತೆ ಸಿನಿಮಾ ಕ್ಷೇತ್ರಕ್ಕೆ ವಾಪಸ್ ಬಂದಿದ್ದಾರೆ. ಮೂಲತ ಉತ್ತರ ಕರ್ನಾಟಕದ ಮಧ್ಯಮವರ್ಗದ ಕಲಾ ಆರಾಧಕರ ಕುಟುಂಬದವರಾದ ನಿರ್ದೇಶಕರರಿಗೆ ಮೊದಲಿನಿಂದಲೂ ರಂಗಭೂಮಿಯ ನಂಟಿತ್ತು. ಅದು ಮುಂದೆ ಬೆಂಗಳೂರಿನ ಪ್ರಯೋಗರಂಗ ಮತ್ತು ನೆನೆಪು ಕಲಾತಂಡಗಳ ಮೂಲಕ ಮುಂದುವರಿಯಿತು. ಅವರು ನಟಿಸಿ ನಿರ್ದೇಶಿಸಿದ ಸಾವಿರಾರು ಬೀದಿನಾಟಕಗಳು ಮತ್ತು ನಾಟಕಗಳು ಕೊಟ್ಟ ಅನುಭವದಿಂದ ಈಗ ಸಿನಿಮಾಗಳನ್ನ ಈಗ ನಿರ್ದೇಶನ ಮಾಡ್ತಿದ್ದಾರೆ.
webdunia
ಫೋರ್ ವಾಲ್ಸ್ & ಟೂ ನೈಟೀಸ್ ಚಿತ್ರದ ನಿರ್ಮಾಪಕರಾದ ಟಿ ವಿಶ್ವನಾಥ್ ನಾಯಕ್ ಕೋಟೆನಾಡು ಚಿತ್ರದುರ್ಗದವರಾಗಿದ್ದು. ತಮ್ಮದೇ ಆದ ವ್ಯವಹಾರಗಳನ್ನು ಹೊಂದಿದ್ದಾರೆ.  ಇವರಿಗೂ ಕೂಡ ಚಿಕ್ಕಂದಿನಿಂದಲೂ ಸಿನಿಮಾ ಮೇಲೆ ಆಸಕ್ತಿ ಇದ್ದು. ಕಲಾವಿದರಾಗಿ ಒಂದೆರಡು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಸ್ವತಂತ್ರ ನಿರ್ಮಾಪಕರಾಗಿ ‘ಫೋರ್ ವಾಲ್ಸ್’   ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಫೋರ್ ವಾಲ್ಸ್ & ಟೂ ನೈಟೀಸ್ ಕುಟುಂಬ ಸಮೇತ ಕುಳಿತು ನೋಡಬಹುದಾದ ಚಿತ್ರವಾಗಿದ್ದು ಯಾವುದೇ ಅಶ್ಲೀಲತೆ ಮತ್ತು ಅಶ್ಲೀಲ ಸಂಭಾಷಣೆಗಳಿರುವುದಿಲ್ಲ. ಇದೊಂದು ತಂದೆ ಮಕ್ಕಳ ಕಥೆಯಾಗಿದ್ದು, ನಮ್ಮ ನಿಮ್ಮೆಲ್ಲರ ಕಥೆ ಅನ್ನೋದು ಚಿತ್ರತಂಡ ಆಶಯ.
webdunia
ಇನ್ನು ಚಿತ್ರದಲ್ಲಿ ಅಚ್ಯುತ್ ಕುಮಾರ್ ಮೂರು ವಿಭಿನ್ನ ಗೆಟಪ್ಗಳಲ್ಲಿ ಕಾಣಿಸಿಕೊಂಡಿದ್ದು, ಇವರ ಜೊತೆಗೆ ದತ್ತಣ್ಣ ಮತ್ತು ಭಾಸ್ಕರ್ ನೀನಾಸಂ ಅವರು ಸಾತ್ ನೀಡಿದ್ದಾರೆ. ಇನ್ನೂ ನಾಯಕಿ ಡಾ|| ಪವಿತ್ರಾ ಅವರು ನಾಟಕ ಕ್ವೇತ್ರದಲ್ಲಿ ಪಿ ಎಚ್ ಡಿ ಪದವಿ ಪಡೆದಿದ್ದು, ಅವರಿಗೆ ಸಿನಿಮಾ ಕ್ಷೇತ್ರದಲ್ಲಿ ಇದು ಮೊದಲನೇ ಚಿತ್ರ. ಇನ್ನುಳಿದಂತೆ ನಾಯಕಿಯರಾದ ಡಾ|| ಜಾನ್ಹವಿ ಜ್ಯೋತಿ, ಶ್ರೇಯಾ ಶೆಟ್ಟಿ, ಆಂಚಲ್ ತಮ್ಮ ಅಭಿನಯದ ಮೂಲಕ ಪಾತ್ರಕ್ಕೆ ಜೀವ ತುಂಬಿದ್ದಾರೆ. ಫೋರ್ ವಾಲ್ಸ್ & ಟೂ ನೈಟೀಸ್ ಚಿತ್ರದ ಚಿತ್ರೀಕರಣ ಕೊನೆಯ ಹಂತದಲ್ಲಿದ್ದು ಇನ್ನೇನು ಡಬ್ಬಿಂಗ್ ಕೆಲಸಗಳು ಪ್ರಾರಂಭವಾಗಬೇಕಿದೆ.
 
ಛಾಯಾಗ್ರಹಣದ ಜವಾಬ್ದಾರಿಯನ್ನು ವಿಡಿಆರ್ ಅವರು ಹೊತ್ತಿದ್ದು ಮೂಲತಃ ಆಂಧ್ರಪ್ರದೇಶದವರಾಗಿದ್ದು  ರುದ್ರಮ್ಮದೇವಿ, ಗರುಡವೇಗ,ಮುಂತಾದ ಚಿತ್ರಗಳಿಗೆ ಕ್ಯಾಮೆರಾ ಹಿಡಿದಿರುವ ಅನುಭವ ಇದೆ.

ದಂಡುಪಾಳ್ಯ,ರಾಮರ್ಜುನ,ಮುಂತಾದ ಚಿತ್ರಗಳಿಗೆ ಸಂಗೀತ ನೀಡಿರುವ ಆನಂದ ರಾಜಾ ವಿಕ್ರಮ ಎನ್ನುವವರು ಫೋರ್ ವಾಲ್ಸ್ & ಟೂ ನೈಟೀಸ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸತೀಶ್ ಚಂದ್ರಯ್ಯ ಸಂಕಲನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ತಾಂತ್ರಿಕ ವರ್ಗದಲ್ಲಿ ನುರಿತ ತಂಡ ಕೆಲಸಮಾಡುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾವಿ ತೊಟ್ಟವರ ಮುಖವಾಡ ಕಳಚಲಿದ್ದಾನಾ ವೇಷಧಾರಿ?