ಬೆಂಗಳೂರು: ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ಮೇಲೆ ಪತಿ ಸುಭಾಕರ್ ರಾವ್ ಅವರೇ ಪೊಲೀಸರಿಗೆ ದೂರು ನೀಡಿದ್ದಾರೆ.
ಸ್ವರ್ಣಲತಾ ಮತ್ತು ಪತಿ ಸುಭಾಕರ್ ರಾವ್ ನಡುವೆ ಮನಸ್ತಾಪಗಳಿವೆ. ಈ ಮೊದಲು ಸ್ವರ್ಣಲತಾಗೆ ಕೋರಮಂಗಲದ ಪ್ರೆಸ್ಟೀಜ್ ಅಪಾರ್ಟ್ ಮೆಂಟ್ ನಲ್ಲಿ ಫ್ಲ್ಯಾಟ್ ಕೊಡಿಸದಿ್ದರು. ಇಬ್ಬರ ನಡುವೆ ಮನಸ್ತಾಪವಾದ ಹಿನ್ನಲೆಯಲ್ಲಿ ಸುಭಾಕರ್ ರಾವ್ ಫ್ಲ್ಯಾಟ್ ಗೆ ಬೀಗ ಹಾಕಿದ್ದರು.
ಆದರೆ ಈಗ ಸ್ವರ್ಣಲತಾ ಬೀಗ ಮುರಿದು ಅಕ್ರಮವಾಗಿ ಮನೆ ಪ್ರವೇಶಿಸಿದ್ದಾರೆ ಎಂದು ಸುಭಾಕರ್ ರಾವ್ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
-Edited by Rajesh Patil