Publish Date: Wed, 05 Sep 2018 (15:08 IST)
Updated Date: Wed, 05 Sep 2018 (15:11 IST)
ಬೆಂಗಳೂರು : ಸ್ಯಾಂಡಲ್ ವುಡ್ ನಟಿ ರಶ್ಮಿಕಾ ಮಂದಣ್ಣ ಅವರನ್ನು ಮದುವೆಯಾಗುವಂತೆ ವಿಜಯ್ ದೇವರಕೊಂಡ ಅವರಲ್ಲಿ ಅಭಿಮಾನಿಗಳು ಮನವಿ ಮಾಡಿದ್ದಾರೆ.
ಸೂಪರ್ ಹಿಟ್ ಸಿನಿಮಾ ‘ಕಿರಿಕ್ ಪಾರ್ಟಿ’ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ನಟಿ ರಶ್ಮಿಕಾ ಮಂದಣ್ಣ ಸ್ಯಾಂಡಲ್ ವುಡ್ ನ ಸ್ಟಾರ್ ನಟರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ನಂತರ ರಕ್ಷಿತ್ ಶೆಟ್ಟಿ ಜೊತೆಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡು ಇದೀಗ ಟಾಲಿವುಡ್ ನತ್ತ ಮುಖ ಮಾಡಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಈಗಾಗಲೇ ಟಾಲಿವುಡ್ ನಟ ವಿಜಯ್ ದೇವರಕೊಂಡ ಅವರ ಜೊತೆ 'ಗೀತಾ ಗೋವಿಂದಂ' ಸಿನಿಮಾದಲ್ಲಿ ನಟಿಸಿದ್ದು, ಈ ಚಿತ್ರ ಸೂಪರ್ ಹಿಟ್ ಎನಿಸಿಕೊಂಡಿದೆ. ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಜೋಡಿಯನ್ನು ಸಿನಿಮಾದಲ್ಲಿ ಮೆಚ್ಚಿದ ಅಭಿಮಾನಿಗಳು ಇದೀಗ ವಿಜಯ್ ದೇವರಕೊಂಡ ಅವರಲ್ಲಿ ರಶ್ಮಿಕಾ ಮಂದಣ್ಣ ಅವರನ್ನು ಮದುವೆಯಾಗುವಂತೆ ಮನವಿ ಮಾಡಿದ್ದಾರೆ.
ಹೌದು, ಇತ್ತೀಚೆಗೆ 'ಗೀತಾ ಗೋವಿಂದಂ' ಸಿನಿಮಾವನ್ನು ನೋಡಿದ ಅಭಿಮಾನಿ, ವಿಜಯ್ ಹಾಗೂ ರಶ್ಮಿಕಾ ಅಭಿನಯವನ್ನು ಮೆಚ್ಚಿ, ರಶ್ಮಿಕಾ ಮತ್ತು ವಿಜಯ್ ಹೇಳಿ ಮಾಡಿಸಿದ ಜೋಡಿ, ನೀವಿಬ್ಬರೂ ಮದುವೆಯಾದರೆ 'ಮೇಡ್ ಫಾರ್ ಈಚ್ ಅದರ್'. ಪ್ಲೀಸ್ ಒಪ್ಪಿಕೊಳ್ಳಿ ಅಣ್ಣ ಎಂದು ವಿಜಯ್ ಅಭಿಮಾನಿಯೊಬ್ಬ ಮನವಿ ಮಾಡಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡಿದ್ದಾನೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.