Publish Date: Fri, 25 Dec 2020 (09:56 IST)
Updated Date: Fri, 25 Dec 2020 (09:57 IST)
ಬೆಂಗಳೂರು: ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಒಂದಾಗಿ ನಟಿಸಿದ್ದ ರಕ್ಷಿತ್ ಶೆಟ್ಟಿ-ರಶ್ಮಿಕಾ ಮಂದಣ್ಣ ರಿಯಲ್ ಲೈಫ್ ನಲ್ಲೂ ನಿಶ್ಚಿತಾರ್ಥ ಮಾಡಿ ಬಳಿಕ ಬ್ರೇಕ್ ಅಪ್ ಆಗಿದ್ದು, ಇಡೀ ರಾಜ್ಯದಲ್ಲೇ ಸುದ್ದಿಯಾಗಿತ್ತು. ಇದೀಗ ರಶ್ಮಿಕಾ ಟಾಲಿವುಡ್, ಬಾಲಿವುಡ್ ನಲ್ಲಿ ಬ್ಯುಸಿಯಾಗಿದ್ದರೆ, ರಕ್ಷಿತ್ ತಮ್ಮದೇ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.
ಇವರಿಬ್ಬರ ನಡುವೆ ಬ್ರೇಕ್ ಅಪ್ ಆಗಿ ಇಷ್ಟು ಸಮಯವೇ ಆದರೂ ಆಗಾಗ ಅಭಿಮಾನಿಗಳು ಮಾತ್ರ ಇಬ್ಬರ ಬಗ್ಗೆ ಪ್ರಶ್ನೆ ಮಾಡುವುದನ್ನು ನಿಲ್ಲಿಸಿಲ್ಲ. ಇದೀಗ ರಕ್ಷಿತ್ ಕಿರಿಕ್ ಪಾರ್ಟಿ ಸಿನಿಮಾದ ಬೆಳಗೆದ್ದು ಯಾರ ಮುಖವ ಹಾಡು 100 ಮಿಲಿಯನ್ ವ್ಯೂ ಪಡೆದ ಖುಷಿಯನ್ನು ಹಂಚಿಕೊಂಡಾಗ ಮತ್ತೆ ಅವರಿಗೆ ರಶ್ಮಿಕಾ ಕುರಿತಾದ ಪ್ರಶ್ನೆ ಅಭಿಮಾನಿಗಳಿಂದ ಬಂದಿದೆ. ರಕ್ಷಿತ್ ಈ ಹಾಡಿನ ಯಶಸ್ಸಿಗೆ ಸಂಗೀತ ನಿರ್ದೇಶಕ ಅಜನೀಶ್, ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ಹೆಸರುಗಳನ್ನು ಟ್ಯಾಗ್ ಮಾಡಿ ಇವರು ಕಾರಣ ಎಂದಿದ್ದರು. ಆದರೆ ರಶ್ಮಿಕಾ ಹೆಸರನ್ನು ಎಲ್ಲಿಯೂ ಉಲ್ಲೇಖಿಸಿರಲಿಲ್ಲ. ಹೀಗಾಗಿ ನೆಟ್ಟಿಗರು ಈ ಹಾಡಿನ ಯಶಸ್ಸಿಗೆ ರಶ್ಮಿಕಾ ಕೂಡಾ ಕಾರಣ, ಅವರ ಹೆಸರನ್ನು ಯಾಕೆ ಟ್ಯಾಗ್ ಮಾಡಿಲ್ಲ. ಇದು ಸರೀನಾ ಎಂದು ಪ್ರಶ್ನೆ ಮಾಡಿದ್ದಾರೆ.